ಗೋರಖ್ಪುರ್ (ಯುಪಿ): ಗರ್ಲ್ ಫ್ರೆಂಡ್ ಜೊತೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ 24 ವರ್ಷದ ಯುವಕನನ್ನು ಹತ್ಯೆ ಮಾಡಲಾದ ಘಟನೆ ಉತ್ತರಪ್ರದೇಶದ ಗೋರಖ್ಪುರ ಜಿಲ್ಲೆಯಲ್ಲಿ ವರದಿಯಾಗಿದೆ. ಗೌತಮ್ ಪಾಲ್ ರವರ ಸಹೋದರಿಯ ಸೂರಜ್ ಎಂಬಾತನ ಜೊತೆ ಕೋಣೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿದ್ದು, ಕೂಡಲೇ ಸೂರಜ್ ಆಕೆಯ ಸಹೋದರನಿಗೆ ಶೂಟ್ ಮಾಡಿದ್ದಾನೆ. ಶೂಟೌಟ್ ಶಬ್ದ ಕೇಳಿ ಮನೆಯವರು ಮತ್ತು ಅಕ್ಕ ಪಕ್ಕದವರು ಓಡಿ ಬಂದಿದ್ದು, ಬಳಿಕ ಸೂರಜ್ ನನ್ನು ಗುಂಪು ಥಳಿಸಿ ಕೊಂದಿತು.

ಮರದ ಕೋಲು ಮತ್ತು ಚೂಪಾದ ಆಯುಧದಿಂದ ಆತನ ಮೇಲೆ ಹಲ್ಲೆ ಮಾಡಲಾಗಿದ್ದು, ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾದರೂ ಆತ ಮೃತ ಪಟ್ಟಿರುವುದಾಗಿ ವೈದ್ಯರು ಹೇಳಿದರು. ಸುದ್ದಿಗಾರರಿಗೆ ಮಾತನಾಡಿದ ಗೋರಖ್ಪುರ್ ಎಸ್ಎಸ್ಪಿ ಸುನೀಲ್ ಗುಪ್ತಾ, ಸೂರಜ್ ಪಾಲ್ ತನ್ನ ಗೆಳತಿಯೊಂದಿಗೆ ಆಕ್ಷೇಪಾರ್ಹ ಸ್ಥಿತಿಯಲ್ಲಿದ್ದ ಎಂದು ದೃಢಪಡಿಸಿದರು.

Leave a Reply