ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​ ಬೈ ಹೇಳಿದ ಯುವರಾಜ್ ಸಿಂಗ್ ಕುರಿತ ಹಲವಾರು ಸ್ಪೂರ್ತಿದಾಯಕ ಸ್ಟೋರಿಗಳು ನಮ್ಮ ಮುಂದೆ ಬರುತ್ತಿವೆ.

2016 ರಲ್ಲಿ ಭಾರತ ತಂಡಕ್ಕೆ ಯುವರಾಜ್ ಸಿಂಗ್ ಪುನಃ ಮರಳುವಾಗ ಅತ್ತಿದ್ದರು ಎಂದು ಯುವರಾಜ್ ಸಿಂಗ್ ಪತ್ನಿ ಹೇಝಲ್ ಹೇಳಿದ್ದಾರೆ.
2016 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಿ -20 ಸರಣಿಗಾಗಿ ಭಾರತೀಯ ತಂಡಕ್ಕೆ ಆಯ್ಕೆಯಾಗುವುದಕ್ಕೆ ಮುಂಚೆ ಕ್ರಿಕೆಟ್ ಕಿಟ್ ನೋಡಿ ಯುವರಾಜ್ ಸಿಂಗ್ ಭಾವುಕಾರಾಗಿ ಅತ್ತಿದ್ದರು.
ನಾನು ಮತ್ತೆ ಭಾರತೀಯ ತಂಡದಲ್ಲಿ ಆಡುತ್ತೇನೆ ಎಂಬ ಕಲ್ಪನೆಯೇ ನನಗಿರಲಿಲ್ಲ ಎಂದು ಯುವರಾಜ್ ಹೇಳಿದ್ದಾಗಿ ಹೇಝಲ್ ಹೇಳಿದರು.

ಯುವರಾಜ್ ಸಿಂಗ್ 2000ನೇ ಇಸವಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು. 304 ಏಕದಿನ ಪಂದ್ಯಗಳನ್ನಾಡಿದ್ದು 8,701 ರನ್ ಹೊಡೆದಿದ್ದಾರೆ. ಇನ್ನು 52 ಅರ್ಧ ಶತಕ ಹಾಗೂ 14 ಶತಕ ಸಿಡಿಸಿದ್ದಾರೆ.
2003ರಲ್ಲಿ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ಯುವಿ ಇಂಗ್ಲೆಂಡ್ ವಿರುದ್ಧ ಮೊದಲ ಪಂದ್ಯವನ್ನಾಡಿದ್ದರು. 40 ಟೆಸ್ಟ್ ಆಡಿರುವ ಯುವಿ 1900 ರನ್ ಬಾರಿಸಿದ್ದಾರೆ. ಇನ್ನು 11 ಅರ್ಧ ಶತಕ ಹಾಗೂ 3 ಶತಕ ಬಾರಿಸಿದ್ದಾರೆ.

ಕ್ಯಾನ್ಸರ್​ನಿಂದ ಗುಣಮುಖರಾದ ಯುವರಾಜ್​ ಮತ್ತೆ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಮರಳಲಿದ್ದಾರೆ ಎನ್ನಲಾಗಿತ್ತು. ಆದರೆ, ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಹಾಗಾಗಿ ಯುವರಾಜ್​ ಸಿಂಗ್​ ವಿದೇಶದಲ್ಲಿ ನಡೆಯುವ ಟಿ-20 ಲೀಗ್​ಗಳಲ್ಲಿ ಪಾಲ್ಗೊಳ್ಳುವ ಆಲೋಚನೆಯಲ್ಲಿದ್ದಾರೆ. ಅಲ್ಲಿ ಸಿಗುವ ಅವಕಾಶ ಬಳಸಿಕೊಂಡು ತಮ್ಮ ವೃತ್ತಿ​ ಮುಂದುವರಿಸಲು ಅವರು ನಿರ್ಧರಿಸಿದ್ದಾರೆ.

Leave a Reply