ಸಾಂದರ್ಭಿಕ ಚಿತ್ರ

ಬೇಕಾಗುವ ಸಾಮಗ್ರಿ: ಕೋಳಿ – 1k.g, ಬೆಳ್ಳುಳ್ಳಿ ಪೇಸ್ಟ್ – 2 ಟೀಸ್ಪೂನ್, ಮೊಸರು – 4 ಟೀಸ್ಪೂನ್ ಕೆಂಪು ಮೆಣಸಿನ ಪೇಸ್ಟ್ – 3 ಟೀಸ್ಪೂನ್, ಗೇರು ಬೀಜ ಪೇಸ್ಟ್ – 2-3 ಟೀಸ್ಪೂನ್, ಕೇಸರಿ ಎಲೆ – 10, ಎಣ್ಣೆ – 50 ಗ್ರಾಂ, ತುಪ್ಪ – 50 ಗ್ರಾಂ, ಲವಂಗ – 6, ನೀರುಳ್ಳಿ ಪೇಸ್ಟ್ – 4, ದಾಲ್ಚಿನಿ – ಒಂದು ತುಂಡು

ಮಾಡುವ ವಿಧಾನ: ಎಣ್ಣೆ ಮತ್ತು ತುಪ್ಪವನ್ನು ಒಟ್ಟು ಸೇರಿಸಿ ಬಿಸಿ ಮಾಡಿ ದಾಲ್ಚಿನಿ ಎಲೆ, ಲವಂಗ ಮತ್ತು ನೀರುಳ್ಳಿ ಪೇಸ್ಟ್ ಹಾಕಿ ಕಂದು ಬಣ್ಣ ಬರುವ ವರೆಗೆ ಕಾಯಿಸಿ. ನಂತರ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಕಾಯಿಸಿ, ಕೆಂಪು ಮೆಣಸಿನ ಪೇಸ್ಟ್ ಸೇರಿಸಿ ಎಣ್ಣೆ ಬಿಡುವ ವರೆಗೆ ಕಾಯಿಸಿ. ಈಗ ಕೋಳಿ ಹಾಗೂ ಉಪ್ಪು ಸೇರಿಸಿ ಬೇಯಿಸಿ. ನಂತರ ಗೇರು ಬೀಜ ಪೇಸ್ಟ್ ಸೇರಿಸಿ ಸ್ವಲ್ಪ ದಪ್ಪ ಆಗುವ ತನಕ ಕುದಿಸಿ, ಕೇಸರಿ ಹಾಕಿ 5 ನಿಮಿಷ ಕುದಿಸಿ, ಬಿಸಿ ಇರುವಾಗಲೇ ತಿನ್ನಲು ಕೊಡಿ. (ಸಾಂದರ್ಭಿಕ ಚಿತ್ರ)

Leave a Reply