ಜೈಪುರ : ಲವ್ ಜಿಹಾದ್ ಆರೋಪ ಹಾಕಿ ವ್ಯಕ್ತಿಯೊಬ್ಬನನ್ನು ಸಜೀವ ದಹನ ಮಾಡಿದ ಪ್ರಕರಣದ ಆರೋಪಿ ಶಂಬುಲಾಲ್ ಗೆ ಬಾಲಕಿಯೊಂದಿಗೆ ಅಕ್ರಮ ಸಂಬಂಧ ಇತ್ತು.
ಸ್ಥಳೀಯ ಮತ್ತು ಕುಟುಂಬದವರ ಗಮನವನ್ನು ಬೇರೆಡೆಗೆ ಸೆಳೆಯಲು ಈ ಕೃತ್ಯಕ್ಕೆ ಲವ್ ಜಿಹಾದ್ ಹೆಸರು ನೀಡಿದ್ದ ಎಂದು ಪೊಲೀಸರು ಬಹಿರಂಗ ಪಡಿಸಿದ್ದಾರೆ.
“ಈ ಬಗ್ಗೆ ಬಾಲಕಿಯ ವಿಚಾರಣೆ ನಡೆದಿದೆ. ಆತ ಕಳೆದ ಹತ್ತು ತಿಂಗಳಿಂದ ಅಕ್ರಮ ಸಂಬಂಧ ಹೊಂದಿದ್ದ‌. ಆ ಬಾಲಕಿ ಹಿಂದೆ ಓರ್ವನ ಜೊತೆ ಓಡಿ ಹೋಗಿದ್ದಳು. ಆಕೆಯನ್ನು ಹಿಂದಕ್ಕೆ ಕರೆಸಿ ಶಂಭುಲಾಲ್ ಬಾಡಿಗೆ ಮನೆಯಲ್ಲಿ ಇರಿಸಿದ್ದ. ಆಕೆಯೊಂದಿಗೆ ಆತ ನಿರಂತರ ಗಲಾಟೆ ಮಾಡುತ್ತಿದ್ದ ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಸಮಾಜದ ಭಯದಿಂದ ಬಾಲಕಿ ಇದನ್ನು ಗುಪ್ತವಾಗಿಟ್ಟಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Leave a Reply