ಧಾರವಾಡ: ಅನಂತಕುಮಾರ ಹೆಗ್ಡೆ ಅವರಿಗೆ ಎರಡು ಮುಖವಿದೆ. ಅಂಬೇಡ್ಕರ್ ಬರೆದ ಸಂವಿಧಾನದ ಬಗ್ಗೆ ಯಾವತ್ತೂ ಗೌರವ ಇಲ್ಲ. ಅದನ್ನ ಬದಲಾವಣೆ ಮಾಡುವುದು ಆರೆಸ್ಸೆಸ್ ವಿಚಾರ. ಭಾರತವನ್ನು ಕೇವಲ ಹಿಂದೂ ರಾಷ್ಟ್ರ ಮಾಡುವುದು, ಏಕರೂಪ ಸಂಹಿತೆ ತರುವುದು, ರಾಮ ಮಂದಿರ ಕಟ್ಟುವುದು ಅವರ ಉದ್ದೇಶವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದು, ಜಾತ್ಯತೀತರಿಗೆ ಅಪ್ಪ ಅಮ್ಮನ ಗುರುತೇ ಇಲ್ಲ ಎಂಬ ಹೆಗಡೆಯವ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ಅವರಷ್ಟು ಕೀಳುಮಟ್ಟಕ್ಕೆ ಹೋಗಿ ನಾನು ಮಾತನಾಡಲ್ಲ. ನಮಗೆ ಸಂಸದೀಯ ಮತ್ತು ಸಂಸ್ಕೃತಿ ಭಾಷೆ ಗೊತ್ತಿದೆ.ಅವರು ಗ್ರಾಮ ಪಂಚಾಯ್ತಿ ಸದಸ್ಯನಾಗಲೂ ಅನರ್ಹರಾಗಿದ್ದಾರೆ. ಅವರ ನಾಲಗೆಯೇ ಅವರ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ ಎಂದು ಜಿಲ್ಲೆಯ ಗರಗ ಗ್ರಾಮದಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಭಾಗವಹಿಸಿದ ಸಿಎಂ ಸಿದ್ದರಾಮಯ್ಯ ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸುತ್ತಾ ವಾಗ್ದಾಳಿ ನಡೆಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಎಂಪಿ ಅನಂತಕುಮಾರ ಹೆಗ್ಡೆ ಕುಮಟಾ ಮತ್ತು ಹೊನ್ನಾವರದಲ್ಲಿ ಬೆಂಕಿ ಹಚ್ಚಿಬಿಡಿ ಎನ್ನುತ್ತಾರೆ. ರಾಜ್ಯ ಸರ್ಕಾರ ಈ ಗಲಭೆಯನ್ನು 144 ಸೆಕ್ಷನ್ ಜಾರಿಗೊಳಿಸಿ ನಿಯಂತ್ರಿಸಿತು. ಆಗ ಹಗ್ಡೆ ಹೇಳುತ್ತಾರೆ, “ಸಿದ್ದರಾಮಯ್ಯನವರೇ ತಪರಾಕಿ ಸಾಕಾ, ಇನ್ನೂ ಬೇಕಾ. ಮುಂದೆ ಕಾದಿದೆ ಮಾರಿಹಬ್ಬ” ಮಾರಿಹಬ್ಬದಲ್ಲಿ ಪ್ರಾಣಿ ಬಲಿಯನ್ನು ನೀಡುತ್ತಾರೆ. ಆದರೆ ಇವರು ಮನುಷ್ಯರನ್ನೇ ಬಲಿ ನೀಡುತ್ತಾರೆ. ಇವರಿಗೆ ಮನುಷ್ಯತ್ವ, ಮಾನವೀಯತೆ ಎಂಬುದೇ ಇಲ್ಲ. ಇಂತಹವರು ಯಾವ ಸಮಾಜ ಬದಲಾವಣೆ ಮಾಡಬಹುದು ಎಂದು ಖಾರವಾಗಿ ಹೇಳಿದರು.

Leave a Reply