ಬೆಂಗಳೂರು: ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಬಾಯಿಗೆ ಬೀಗ ಹಾಕಿಸುತ್ತೇವೆ. ಯಾರ ಮೂಲಕ ಹೇಳಿಸಬೇಕು ಹೇಳಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ಡಾಲರ್ಸ್ ಕಾಲನಿಯ ಬಿಸ್‌ವೈ ನಿವಾಸದಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಅನಂತ್ ಕುಮಾರ್ ಹೆಗಡೆ ಅವರ ವಿಷಯ ಪ್ರಸ್ತಾಪವಾಯಿತು. ಅವರ ವಿವಾದಾತ್ಮಕ ಹೇಳಿಕೆಗಳನ್ನು ತಡೆಯಲೇಬೇಕು ಎಂಬ ಒತ್ತಾಯ ಸಿ.ಎಂ. ಉದಾಸಿ, ಕಾರಜೋಳ ಸೇರಿದಂತೆ ಹಲವರಿಂದ ಅಸಮಾಧಾನ ವ್ಯಕ್ತವಾದ ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ನೇತೃತ್ವದಲ್ಲಿ ಗಂಭೀರ ಚರ್ಚೆ ನಡೆದು ಅನಂತ್ ಕುಮಾರ್ ಹೆಗಡೆ ಬಾಯಿಗೆ ಬ್ರೇಕ್ ಹಾಕಲು ನಿರ್ಧಾರಕ್ಕೆ ಬರಲಾಯಿತು. ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ಬಿಜೆಪಿಗೆ ನಂಬಿಕೆ ಇದೆ. ಅದರಂತೆ ನಡೆದುಕೊಳ್ಳುತ್ತೇವೆ

Leave a Reply