ಬೆಂಗಳೂರು (ಡಿ.25): ನಿನ್ನೆ ಕೊಪ್ಪಳದಲ್ಲಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ನೀಡಿದ ಹೇಳಿಕೆ ಈಗ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಹಲವರು ಅನಂತ್ ಕುಮಾರ್ ಹೆಗ್ಡೆ ಹೇಳಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೀಗ, ಟಿ. ಶಶಿಧರ್ ಎಂಬುವರು ಅನಂತ್ ಕುಮಾರ್ ಹೆಗಡೆ ವಿರುದ್ಧ ರಾಷ್ಟ್ರಪತಿಗಳಿಗೆ ದೂರು ನೀಡಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಸಂಪುಟದಿಂದ ಅನಂತ್ ಕುಮಾರ್ ಅವರನ್ನ ವಜಾಗೊಳಿಸಲು ರಾಷ್ಟ್ರಪತಿಗಳಿಗೆ ಮನವಿ ಮಾಡಿ ಪತ್ರ ಬರೆದಿದ್ದಾರೆ. ಹೆಗಡೆ ವಿರುದ್ಧ ಆರೋಪಿಸಿರುವ ಅವರು, ಕೇಂದ್ರ ಸಚಿವರು ಸಾರ್ವಜನಿಕವಾಗಿ ಜಾತ್ಯಾತೀತರ ವಿರುದ್ಧ ಅಸಾಂವಿಧಾನಿಕ ಪದಗಳನ್ನು ಪ್ರಯೋಗ ಮಾಡುತ್ತಿದ್ದು, ಭಾರತದ ಸಂವಿಧಾನದ ವಿರುದ್ಧ ಮಾತನಾಡಿದ್ದಾರೆ. ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನವನ್ನ ಬದಲಿಸಲು ಎನ್ನುವ ಮೂಲಕ ಸಮಾಜದಲ್ಲಿ ಒಡಕು ತರುವಂತತ ಕೆಲಸ ಮಾಡುತ್ತಿದ್ದಾರೆ ಎಂದು ರಾಷ್ಟ್ರಪತಿಯವರಿಗೆ ಬರೆದಿರುವ ಪತ್ರದಲ್ಲಿ ದೂರಿದ್ದಾರೆ.

Leave a Reply