ಕಣ್ಣೂರು 19/12/2017: ಕಣ್ಣೂರಿನ ಕದಿರೂರ್ ಎಂಬಲ್ಲಿ ಆರೆಸ್ಸಸ್ ಕಾರ್ಯಕರ್ತನೋರ್ವನನ್ನು ಮುಸುಕುದಾರಿ ತಂಡವೊಂದು ಇರಿದು ಪರಾರಿಯಾಗಿದೆ. ಆರೆಸ್ಸಸ್ ಪೊಣ್ಯಂ ಮಂಡಲ ಕಾರ್ಯವಾಹಕ್ ಪ್ರವೀಣ್ ಇರಿತಕ್ಕೊಳಗಾದವರು. ಮಂಗಳವಾರ ಸಂಜೆ 7 ಗಂಟೆಗೆ ತನ್ನ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಪ್ರವೀಣ್‌ನನ್ನು ಕದಿರೂರ್ ಪುಲ್ಯಾಡ್ ಎಂಬಲ್ಲಿ ಮುಸುಕುದಾರಿಯಲ್ಲಿ ಬಂದ ತಂಡವೊಂದು ದ್ವಿಚಕ್ರ ವಾಹನವನ್ನು ಅಡ್ಡಗಟ್ಟಿ ಇರಿದು ಪರಾರಿಯಾಗಿದ್ದಾರೆ.

ಕಾಲಿಗೆ ಹಾಗೂ ಕೈಗೆ ತೀವ್ರವಾಗಿ ಗಾಯಗೊಂಡ ಬಿದ್ದಿದ್ದ ಪ್ರವೀಣ್ ನನ್ನು ಇಲ್ಲಿನ ತಲಶ್ಶೇರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿದ ಬಳಿಕ ಕೋಝಿಕ್ಕೋಡ್ ಮೆಡಿಕಲ್ ಕಾಲೇಜಿಗೆ ಕರೆದೊಯ್ಯಲಾಗಿದೆ. ಆರೊಪೀಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Leave a Reply