ಕಡಲ ತೀರದಲ್ಲಿ ಕುಳಿತು ಕೊಂಡು ಉಪದೇಶ ಕೇಳುತ್ತ ಇರುವಾಗ ನಾಯಿಯೊಂದು ಬಾಯಿಯಲ್ಲಿ ಮೂಳೆಯನ್ನು ಹಿಡಿದು ಆಚೆ ಈಚೆ ಓಡುತ್ತಾ ಇತ್ತು. ಸ್ವಲ್ಪ ಹೊತ್ತಿನಲ್ಲಿ ಕಾಗೆಯೊಂದು ಬಂದು ಅಲ್ಲಿ ಬಿದ್ದಿದ್ದ ಮರದ ಕಡ್ಡಿಗಳನ್ನು ಎತ್ತಿ ಹಾರಿ ಹೋಯಿತು.

ಸಂತ ಹೇಳಿದರು, ಇದನ್ನು ಸ್ವಲ್ಪ ಹೊತ್ತು ಗಮನಿಸು.. ನಾಯಿ ಆ ಬದಿ ಒಮ್ಮೆ ಈ ಬದಿ ಒಮ್ಮೆ ಓಡುತ್ತಲೇ ಇತ್ತು. ಕಾಗೆ ಇನ್ನೊಮ್ಮೆ ಬಂದು ಕಡ್ಡಿಗಳನ್ನು ಎತ್ತಿ ಹಾರಿ ಹೋಯಿತು. ನಾಯಿ ಅದೇ ರೀತಿ ಮಾಡುತ್ತಲೇ ಇತ್ತು. ಸ್ವಲ್ಪ ಹೊತ್ತಿನಲ್ಲಿ ಕಡಲು ತೀರದಲ್ಲಿ ಆಡಲು ಕೆಲವು ಮಕ್ಕಳು ಬಂದರು. ಅವರು ನಾಯಿಯನ್ನು ಕಲ್ಲು ಹೊಡೆದು ಓಡಿಸಿದರು. ನಾಯಿ ತನ್ನ ಬಾಯಿಯಲ್ಲಿ ಇದ್ದ ಮೂಳೆಯನ್ನು ಬಿಟ್ಟು ಬೊಗಳುತ್ತಾ ಓಡಿ ಹೋಯಿತು…

ಸಂತ: ಈ ಭೂಮಿಯೆನ್ನುವ ವಿಶಾಲ ಕಡಲ ಕಿನಾರೆಯಲ್ಲಿ ನಮಗೆ ಎಲ್ಲವು ಸಿಗುತ್ತದೆ. ಕೆಲವರು ನಾಯಿಯಂತೆ. ಇಲ್ಲಿ ಸಿಗುವ ಕ್ಷಣಿಕ ಸುಖವಾದ ಮೂಳೆಯನ್ನು ಜಗಿಯುತ್ತಾ ತನ್ನ ಬಾಯಿಯಿಂದ ಯಾರು ಮೂಳೆ ತೆಗೆಯಬಾರದು ಎನ್ನುವ ಎಚ್ಚರಿಕೆಯಲ್ಲಿ ಇನ್ನೊಂದು ಮೂಳೆಯ ಹುಡುಕಾಟ ನಡೆಸುತ್ತಾ ಅತ್ತ ಇತ್ತ ಓಡುತ್ತಾ ಇರುತ್ತಾರೆ. ಅವರಿಗೆ ಕೊನೆಗೆ ಏನು ಸಿಗುತ್ತದೆ ಎಂದು ನೀವು ನೋಡಿದ್ದೀರಿ. ಇನ್ನು ಕೆಲವರು ತಮ್ಮ ಆಸೆಗಳನ್ನು ಬದಿಗೆ ಸರಿಸಿ ಕಾಗೆಯಂತೆ ಕಡ್ಡಿಗಳನ್ನು ಎತ್ತಿ ಸ್ವರ್ಗವೆನ್ನುವ ಉದ್ಯಾನವದಲ್ಲಿ ತಮಗೆ ಮನೆ ಕಟ್ಟುವ ಕೆಲಸದಲ್ಲಿ ನಿರತರಾಗಿರುತ್ತಾರೆ.

Leave a Reply