ಮಂಗಳೂರು: ಮಂಗಳೂರಿನ ಇತಿಹಾಸ ಪ್ರಸಿದ್ಧ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದ ಧ್ವನಿವರ್ಧಕದಲ್ಲಿ ಹಾಕಲಾಗುವ ಶ್ಲೋಕವನ್ನು ನಿಲ್ಲಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.

ನಗರದ ಕದ್ರಿ ದೇವಸ್ಥಾನದಲ್ಲಿ ವಿಶೇಷ ದಿನಗಳಲ್ಲಿ ಶ್ಲೋಕ ಮತ್ತು ಭಕ್ತಿಗೀತೆಗಳನ್ನು ಉಚ್ಚ ಧ್ವನಿವರ್ಧಕದಲ್ಲಿ ಹಾಕುವುದರಿಂದ ತೊಂದರೆಯಾಗುತ್ತಿದೆ ಎಂದು ಸ್ಥಳೀಯ ನಿವಾಸಿ ಬ್ಲೇನಿ ಡಿಸೋಜಾ ಮಂಗಳೂರು ಮೇಯರ್ ಮತ್ತು ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರಿಗೆ ಮನವಿ ಮಾಡಿದ್ದು, ಇದರಿಂದ ಸ್ಥಳೀಯ ಫ್ಲ್ಯಾಟ್ ಗಳಲ್ಲಿ ನೆಲೆಸುವವರಿಗೆ ತೊಂದರೆಯಾಗುತ್ತಿದೆ. ದೇವಸ್ಥಾನದ ಒಳಭಾಗಕ್ಕೆ ಕೇಳಿಸುವಂತೆ ಮಾತ್ರ ಹಾಕಲು ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಆರು ತಿಂಗಳ ಹಿಂದೆ ಬ್ಲೇನಿ ಡಿಸೋಜಾ ಸೇರಿದಂತೆ ಕೆಲವರು ಸಲ್ಲಿಸಿದ್ದ ಮನವಿಗೆ ಇದೀಗ ಮುಜರಾಯಿ ಇಲಾಖೆಯಿಂದ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗೆ ಕ್ರಮಕೈಗೊಳ್ಳಲು ಸೂಚಿಸಲಾಗಿದೆ. ಇದು ಹಿಂದೂ ಸಂಘಟನೆಗಳನ್ನು ಕೆರಳಿಸಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಧ್ವನಿವರ್ಧಕದಲ್ಲಿ ಹಾಕುವ ಭಕ್ತಿ ಗೀತೆಗಳನ್ನು ನಿಲ್ಲಿಸಿದರೆ ಹೋರಾಟ ನಡೆಸುವ ಎಚ್ಚರಿಕೆ ಬಂದಿದ್ದು, ಮಾತ್ರವಲ್ಲ ಚರ್ಚ್, ಮಸೀದಿಗಳಲ್ಲಿ ಹಾಕುವ ಧ್ವನಿವರ್ಧಕಗಳಿಗೂ ಕಡಿವಾಣ ಹಾಕಿ ಎಂಬ ಆಗ್ರಹ ಸಾಮಾಜಿಕ ಜಾಲತಣಗಳಲ್ಲಿ ಎತ್ತಲಾಗಿದೆ.

Leave a Reply