ಪಶ್ಚಿಮ ಸಿಂಹಭೂಮ್ ಜಿಲ್ಲೆಯ ಗ್ರಾಮದ ಪುಷ್ಪ ಸಿಂಕು ರವರನ್ನು ಎಲ್ಲರೂ ಕಿಸಾನ್ ದೀದಿ ಎಂದು ಕರೆಯುತ್ತಾರೆ.ಅವರು ಇಲ್ಲಿ ಈ ಹೆಸರಿನಿಂದ ಪ್ರಸಿದ್ಧರಾಗಿದ್ದಾರೆ. ಪುಷ್ಪರವರ ಕಥೆಯು ಆಸಕ್ತಿದಾಯಕ ಮತ್ತು ಬಹಳ ಸ್ಪೂರ್ತಿದಾಯಕವಾಗಿದೆ. ಕುಟುಂಬ ಪೋಷಣೆಯ ಆಧಾರ ಕೃಷಿ ಮಾತ್ರ. ಆದರೆ ಹೆಚ್ಚಿನ ಭೂಮಿ ಬಂಜರು. ಕುಟುಂಬ ಬೆಳೆದಂತೆ, ಬಡತನ ಮತ್ತು ಇತರ ಎಲ್ಲಾ ಸಮಸ್ಯೆಗಳು ಒಟ್ಟೊಟ್ಟಿಗೆ ಬೆಳೆದವು.

ಪುಷ್ಪರಿಗೆ ಏನೂ ದಿಕ್ಕು ತೋಚದಿದ್ದಾಗ ಪಿಕಾಸಿ ತೆಗೆದುಕೊಂಡು ನೇರವಾಗಿ ಬಂಜರು ಭೂಮಿಗೆ ಹೋದರು. ಅವರ ಮುಂದಿದ್ದ ಹೋರಾಟ, ಸವಾಲು ಸಣ್ಣದಾಗಿರಲಿಲ್ಲ. ಆದರೆ ಅವರು ತಾಳ್ಮೆಯೊಂದಿಗೆ ಕೆಲಸ ಮಾಡಿದರು. ಅಂತಿಮವಾಗಿ, ಪಾಳು ಭೂಮಿಯಿಂದ ಫಲ ಚಿಗುರೊಡೆಯಿತು. ಬಂಜರು ಭೂಮಿಯನ್ನು ಫಲವತ್ತಾಗಿಸಲು ಪುಷ್ಪರಿಗೆ ಹತ್ತು ವರ್ಷಗಳು ತಗಲಿದವು.

ಪುಷ್ಪ ಈಗ ಇತರ ಮಹಿಳೆಯರನ್ನು ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸುತ್ತಿದ್ದಾರೆ.
2007ರಲ್ಲಿ ಪುಷ್ಪಾರಿಗೆ ಮೊದಲ ಬಾರಿಗೆ ಈ ಕೆಲಸದಲ್ಲಿ ದೊಡ್ಡ ವೈಫಲ್ಯವಾಗಿತ್ತು. ಬಂಜರು ಭೂಮಿ ಬಂಜರು ಆಗಿಯೇ ಇರುವುದು ಎಂದು ಅವರು ಭಾವಿಸಿದರು. ಆದರೆ ಪುಷ್ಪಾ ಬಿಟ್ಟುಕೊಡಲಿಲ್ಲ. ಅವರಿಗೆ ಯಾವುದೇ ಆಯ್ಕೆ ಇರಲಿಲ್ಲ. ಅದೃಷ್ಟವಶಾತ್ ಕೃಷಿ ಇಲಾಖೆಯಿಂದ ವಿಜ್ಞಾನಿಗಳನ್ನು ಸಂಪರ್ಕಿಸಲಾಯಿತು ಮತ್ತು ಮುಂದೆ ಪರಿಶ್ರಮ ಮತ್ತು ಮಾರ್ಗದರ್ಶನ ಫಲ ನೀಡಿತು.
10 ಎಕರೆ ಭೂಮಿಯಲ್ಲಿ ಸಾಕಷ್ಟು ಉತ್ಪಾದನೆ ಪ್ರಾರಂಭವಾಯಿತು. ವಿಜ್ಞಾನಿಗಳ ಸಲಹೆಯ ಮೇರೆಗೆ, ಸಾವಯವ ಗೊಬ್ಬರವನ್ನು ತಯಾರಿಸಲು ಪ್ರಾರಂಭಿಸಿದರು. ಮೊದಲಿಗೆ ಅವರಿಗೆ ಎರಡು ಹಸುಗಳು ಇದ್ದವು, ಆದರೆ ಸಾವಯವ ಗೊಬ್ಬರಕ್ಕಾಗಿ ಅವರು 14 ಹಸುಗಳನ್ನು ಒಂದೊಂದಾಗಿ ಮಾಡಿದರು.
ಸಾವಯವ ಗೊಬ್ಬರದ ಜೊತೆಗೆ ಹಾಲು ಮಾರಾಟದಿಂದ ತಿಂಗಳಿಗೆ 25 ಸಾವಿರ ರೂ. ಗಳಿಸಲು ಪ್ರಾರಂಭಿಸಿದರು. ಅವರು ಋತುವಾರು ತರಕಾರಿಗಳು ಸೇರಿದಂತೆ ಅಕ್ಕಿ, ಗೋಧಿ, ಸಾಸಿವೆ, ನಾರಗಸೆ, ಹೂಕೋಸು, ಮೆಣಸು, ಟೊಮೆಟೊ, ಕೊತ್ತಂಬರಿ, ಹಾಗಲಕಾಯಿಯನ್ನು ಮುಂತಾದವುಗಳನ್ನು ಬೆಳೆಯುತ್ತಿದ್ದಾರೆ.

ಅವರ ಈ ಸಾಧನೆಯ ಫಲವಾಗಿ ಅವರನ್ನು ಹುಡುಕಿಕೊಂಡು ಹಲವಾರು ಪ್ರಶಸ್ತಿಗಳು ಬಂದವು.
2008 ರಲ್ಲಿ ರಾಂಚಿಯಲ್ಲಿ ಆಯೋಜಿಸಲಾದ ಕೃಷಿ ಮೇಳದಲ್ಲಿ ಅತ್ಯುತ್ತಮ ಮಹಿಳಾ ಕೃಷಿಕ ಗೌರವವನ್ನು ಪಡೆದರು. 2010 ರಲ್ಲಿ ಜಿಲ್ಲಾ ಮಟ್ಟದ ಕೃಷಿ ಉತ್ಸವದಲ್ಲಿ ಅವರು ಅತ್ಯುತ್ತಮ ಮಹಿಳಾ ರೈತರಾಗಿ ಆಯ್ಕೆಯಾದರು. ಅದೇ ಸಮಯದಲ್ಲಿ, ಹೈದರಾಬಾದ್ನಲ್ಲಿ ನಡೆದ 2014 ರ ಅಖಿಲ ಭಾರತ ಕೃಷಿ ಸಮ್ಮೇಳನದಲ್ಲಿ, ಅತ್ಯುತ್ತಮ ಮಹಿಳಾ ರೈತ ಎಂದು ಅವರನ್ನು ಗೌರವಿಸಲಾಯಿತು.

Leave a Reply