ನವದೆಹಲಿ (ಪಿಟಿಐ): ಜಯಲಲಿತಾ ಎಂದು ಬರೆಯಲು ಹೋಗಿ ಶಶಿಕಾಲಾ ಹೆಸರು ಬರೆದ ಪಾಕಿಸ್ತಾನದ ಕ್ರಿಕೆಟ್ ಆಟಗಾರ ರಾಜಕಾರಣಿ ಇಮ್ರಾನ್ ಖಾನ್ ಟ್ವೀಟ್ ಮಾಡಿ ಮುಜುಗರಕ್ಕೀಡಾಗಿದ್ದಾರೆ.

“ಭಾರತದ ತಮಿಳುನಾಡಿನಲ್ಲಿ ರಾಜಕಾರಣಿಯಾದ ಪ್ರಸಿದ್ಧ ದಕ್ಷಿಣ ಭಾರತೀಯ ನಟಿ ಶಶಿಕಾಲಾ ಅವರು ಇತ್ತೀಚೆಗೆ ನಿಧನರಾದರು. ಅವರ ಮನೆಯಲ್ಲಿ ಚಿನ್ನ, ಆಭರಣಗಳು ಮತ್ತು ಅಕ್ರಮ ಹಣವನ್ನು ಪತ್ತೆ ಹಚ್ಚಲಾಗಿದೆ. ಅಕ್ರಮವಾಗಿ ಸಂಪತ್ತು ಗಳಿಸುವವರಿಗೆ ಇದೊಂದು ಸಂದೇಶವಾಗಿದೆ. ಎಲ್ಲವನ್ನೂ ಇಲ್ಲಿ ಬಿಟ್ಟು ಹೋಗಬೇಕು ಎಂದು ಟ್ವೀಟ್ ಮಾಡಿದ್ದರು. ನಂತರ ತನ್ನಲ್ಲಿ ತಪ್ಪು ಸಂಭವಿಸಿದೆ ಎಂದು ಮನಗಂಡ ಇಮ್ರಾನ್ ಖಾನ್ ಟ್ವೀಟ್ ಡಿಲೀಟ್ ಮಾಡಿದ್ದರು.

Leave a Reply