ಕಟಕ್: ಪ್ರಥಮ T20 ಪಂದ್ಯದಲ್ಲಿ ಭಾರತ ಅತಿಥೇಯ ಶ್ರೀಲಂಕಾ ತಂಡವನ್ನು ಭರ್ಜರಿ 93 ರನ್‌ಗಳಿಂದ ಪರಾಭವಗೊಳಿಸಿದೆ.‌ 181 ರನ್‌ಗಳ ಮೊತ್ತವನ್ನು ಬೆನ್ನಟ್ಟಿದ ಶ್ರೀಲಂಕಾ ಕೇವಲ 16 ಓವರಿನಲ್ಲಿ 87 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿದೆ. ಆರಂಭದ ಓವರಿನಲ್ಲಿ ವಿಕೆಟ್ ಕೀಪರ್ ನಿರೋಶ‌ನ್ ಡಿಕ್‌ವೆಲ್ಲಾ ಭರ್ಜರಿ ಬ್ಯಾಟ್ ಬೀಸಿದ್ದಾದರು ಹೆಚ್ಚು ಹೊತ್ತು ಕ್ರೀಸಿನಲ್ಲಿ ನಿಲ್ಲಲಿಲ್ಲ.
ಟೀಟ್ವೆಂಟಿ ಸ್ಪೇಷಲಿಸ್ಟ್ ಬೌಲರೆಂದೇ ಖ್ಯಾತಿ ಪಡೆದಿದ್ದ ಯುಜುವೆಂದ್ರ ಚಾಹಲ್ ದಾಳಿಗೆ ಇಳಿದ ಬಳಿಕ ಶ್ರೀಲಂಕಾದ ಅಗ್ರಕ್ರಮಾಂಕದ ಆಟಗಾರರು ಒಬ್ಬರ ಹಿಂದೊಬ್ಬರಂತೆ ಪೆವಿಲಿಯನಿಗೆ ಪೆರೇಡ್ ನಡೆಸಿದರು. ಶ್ರೀಲಂಕಾ ಪರ ಉಪುಲ್ ತರಂಗ 23 ಹಾಗೂ ಕುಸಾಲ್ ಪಿರೇರಾ 19 ರನ್‌ಗಳ ಹೊರತಾಗಿ ಉಳಿದ ಯಾವುದೇ ಬ್ಯಾಟ್ಸ್‌ಮನುಗಳು ಪ್ರತಿರೋಧ ತೋರಿಸುವ ಆಸಕ್ತಿ ತೋರಿಲ್ಲ. ಯುಜುವೇಂದ್ರ ಚಹಾಲ್ 23ಕ್ಕೆ 4 ವಿಕೆಟ್, ಹಾರ್ದಿಕ್ ಪಾಂಡ್ಯ ‌29ಕ್ಕೆ 3 ವಿಕೆಟ್,‌ ಕುಲದೀಪ್ ಯಾದವ್ 18ಕ್ಕೆ 3 ವಿಕೆಟ್ ಪಡೆದರು ಯಶಸ್ವಿ ಬೌಲರ್ ಆಗಿ ಮಿಂಚಿದರು.
.ಇದಕ್ಕು‌ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ, ಹಂಗಾಮಿ ನಾಯಕ ರೋಹಿತ್ ಶರ್ಮಾ 17 ರನ್ ಗಳಿಸಿ‌ ಬೇಗನೆ ಪೆವಿಲಿಯನ್ ಹಾದಿ ಹಿಡಿದರು. ಪ್ರಾರಂಭದಲ್ಲೇ ವಿಕೆಟ್ ಕಳೆದುಕೊಂಡರೂ, ವನ್ ಡೌನಾಗಿ ಬಂದ ಶ್ರೇಯಸ್ ‍ಅಯ್ಯರ್ ಮತ್ತು‌ ಆರಂಭಿಕ ದಾಂಡಿಗ ಕನ್ನಡಿಗ ಕೆಎಲ್ ರಾಹುಲ್ ಜೊತೆಗೂಡಿ ನೂರು ರನ್ನುಗಳ ಗಡಿ ದಾಟಿಸಿದರು. ಕೆಲ್‌ಎಲ್ ರಾಹುಲ್ 61 ರನ್‌ಗಳ ಅಮೋಘ ಕೊಡುಗೆಯನ್ನು ನೀಡಿದರೆ ನಂತರ ಬಂದ ಬ್ಯಾಟ್ಸ್‌ಮನ್ ಗಳಾದ ಮಾಜಿ ನಾಯಕ ಎಂ.ಎಸ್. ಧೋನಿ ಹಾಗೂ ಮತ್ತೋರ್ವ ಕನ್ನಡಿಗ ಮನೀಶ್ ಪಾಂಡೆ‌ ಭರ್ಜರಿ ಬೌಂಡರಿ, ಸಿಕ್ಸರ್‌ಗಳನ್ನೊಳಗೊಂಡ ಬ್ಯಾಟಿಂಗ್ ಪ್ರದರ್ಶನ ಮಾಡುವ ಮೂಲಕ ಭಾರತದ ರನ್‌ಗಳನ್ನು 180 ದಾಟಲು ಸಹಕರಿಸಿದರು. ಶ್ರೀಲಂಕಾ ಪರ ಅಂಜೇಲೋ ಮ್ಯಾಥ್ಯೂಸ್‌, ಥಿಸಾರ ಪಿರೇರಾ, ನುವಾನ್ ಪ್ರದೀಪ್ ತಲಾ ಒಂದೊಂದು ವಿಕೆಟ್ ಪಡೆದರು.

Leave a Reply