ವಾಟ್ಸಪ್ ಇಲ್ಲದೆ ಯಾವುದೇ ಸ್ಮಾರ್ಟ್ ಫೋನ್ ಊಹಿಸಲು ಸಾಧ್ಯವಿಲ್ಲ. ಆದರೆ ಇನ್ನು ಮುಂದೆ ಡಿ.31 ರಿಂದ ನಿರ್ದಿಷ್ಟಟ
ಕೆಲವು ಸ್ಮಾರ್ಟ್ ಫೋನ್ ನಲ್ಲಿ ವಾಟ್ಸಪ್ ಬಳಕೆ ಮಾಡಲು ಸಾಧ್ಯವಾಗದು ಎಂದು ಸಂಸ್ಥೆ ತಿಳಿಸಿದೆ.

ಬ್ಲ್ಯಾಕ್ ಬೆರಿ ಒಎಸ್, ಬ್ಲ್ಯಾಕ್ ಬೆರಿ 10, ವಿಂಡೋಸ್ ಫೋನ್ 8.0 ಗಳಲ್ಲಿ ಡಿ.31 ರಿಂದ ವಾಟ್ಸ್ ಆಪ್ ತನ್ನ ಸಪೋರ್ಟ್ ನ್ನು ವಾಪಸ್ ಪಡೆಯಲಿದ್ದು, ಈ ಫೋನ್ ಗಳಿಗೆ ಹೊಸದಾಗಿ ವಾಟ್ಸ್ ಆಪ್ ನ್ನು ಅಭಿವೃದ್ಧಿಪಡಿಸುವುದಿಲ್ಲ ಎಕ್ಸ್ ಪ್ರೆಸ್.ಕೋ.ಯುಕೆ ವರದಿಯಲ್ಲಿ ತಿಳಿಸಲಾಗಿದೆ.

ವಾಟ್ಸಪ್ ನ ಅ್ಯಾಪ್ ನಲ್ಲಿ ಬದಲಾವಣೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಈ ಬದಲಾವಣೆ ಆದರೆ
ಮುಂಬರುವ ದಿನಗಳಲ್ಲಿ ಫೋನ್ ಗಳು ಸಹಕರಿಸುವುದಿಲ್ಲ. ಈ ಫೋನ್ ಗಳಲ್ಲಿ ವಾಟ್ಸ್ ಆಪ್ ಬಳಕೆ ಮಾಡಬೇಕೆಂದರೆ ಆಪರೇಟಿಂಗ್ ಸಿಸ್ಟಮ್ ನ್ನು ಆಂಡ್ರಾಯ್ಡ್ ಒಎಸ್ 4.0+ ಐಫೋನ್ ಐಒಎಸ್ 7+, ವಿಂಡೋಸ್ 8.1+ ಗೆ ಅಪ್ ಗ್ರೇಡ್ ಮಾಡಿಕೊಳ್ಳಬೇಕು ಎಂದು ಸಂಸ್ಥೆ ತಿಳಿಸಿದೆ.

Leave a Reply