ಮಹೇಂದ್ರ ಸಿಂಗ್ ಧೋನಿಯವರು ತನಗಿಂತ 10 ವರ್ಷ ಕಿರಿಯ ಆಟಗಾರರಿಗಿಂತ ಹೆಚ್ಚು ಫಿಟ್ ಆಗಿದ್ದಾರೆ ಎಂದು ಮಾಜಿ ಕಪ್ತಾನ, ಕೋಚ್ ರವಿ ಶಾಸ್ತ್ರಿ ಹೇಳಿದ್ದಾರೆ. ಮಾಜಿ ನಾಯಕ ಧೋನಿಯವರ ನ್ಯೂನತೆಗಳನ್ನು ಬೊಟ್ಟು ಮಾಡುವ ಮೊದಲು, ತಾವು ವೃತ್ತಿಜೀವನದಲ್ಲಿ 36 ವಯಸ್ಸಾಗಿದ್ದಾಗ ಹೇಗಿದ್ದಿರಿ ಎಂದು ವಿಶ್ಲೇಷಿಸಬೇಕೆಂದು ಅವರು ಹೇಳಿದ್ದಾರೆ.

ಕೆಲವು ಟೀಕೆಗಳ ಹೊರತಾಗಿಯೂ ಶ್ರೀಲಂಕಾದ ವಿರುದ್ಧದ ನಿಯಮಿತ ಓವರುಗಳ ಸರಣಿಯಲ್ಲಿ ಧೋನಿ ಅದ್ಭುತ ಸಾಧನೆ ಮಾಡಿದ್ದಾರೆ. ಕೀಪರ್-ಬ್ಯಾಟ್ಸ್ಮನ್ ಎರಡರಲ್ಲೂ ಉತ್ತಮವಾಗಿ ಆಡಿದ್ದಾರೆ ಎಂದು ಶಾಸ್ತ್ರಿ ಅಭಿಪ್ರಾಯ ಪಟ್ಟಿದ್ದಾರೆ.

ವಿಕೆಟ್ ಹಿಂದೆ ನಿಂತು ವಿಕೆಟ್ ಗಳಿಸುವಲ್ಲಿ ಧೋನಿಗೆ ಯಾರೂ ಸಾಟಿಯಿಲ್ಲ. ಅವರ ವಿಶ್ವಕಪ್ ಕೊಡುಗೆ ಅಪಾರವಾದದ್ದು, ಮುಂಬರುವ ದಕ್ಷಿಣಾಫ್ರಿಕ ಪ್ರವಾಸದಲ್ಲಿ ತಂಡವು ಉತ್ತಮ ಪ್ರದರ್ಶನ ತೋರಲಿದೆ ಎಂದರು.

Leave a Reply