ಒಂದು ನಿಮಿಷದಲ್ಲಿ ಒಂದು ಕೈಯಿಂದ ಹೆಚ್ಚಿನ ತೆಂಗಿನಕಾಯಿ’ ಹೊಡೆದುರುಳಿಸಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ತನ್ನಹೆಸರನ್ನು ಅಭೀಶ್ ಡೊಮಿನಿಕ್ ಗುರುತಿಸಿದ್ದಾರೆ.
ಕೇರಳದ ಕೊಟ್ಟಾಯಂ ಜಿಲ್ಲೆಯ ಈ ವ್ಯಕ್ತಿ ಸಾಲಾಗಿ ನಿಂತಿರುವ 122 ತೆಂಗಿನ ಕಾಯಿಯನ್ನು ಮುರಿಯುವ ಮೂಲಕ 118 ರ ಹಿಂದಿನ ದಾಖಲೆಯನ್ನು ಮುರಿದರು,
ಸೆಕೆಂಡಿಗೆ ಎರಡು ತೆಂಗಿನ ಕಾಯಿ ವೇಗದಲ್ಲಿ ಅವರು ಈ ಸಾಧನೆಯನ್ನು ಮಾಡಿದರು. ನೆರೆದಿದ್ದ ಅವರ ಸ್ನೇಹಿತರು ಹರ್ಷೋದ್ಘಾರ ಮೊಳಗಿಸಿದರು.

“ನಾನು ಹಿಂದಿನ ರೆಕಾರ್ಡ್ ಅನ್ನು ಮುರಿಯಲು ನಿರ್ಧರಿಸಿದ್ದೇನೆ ಏಕೆಂದರೆ ನಾನು ದೂರದ ಗ್ರಾಮದಿಂದ ಬಂದಿದ್ದೇನೆ ಮತ್ತು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ನಮ್ಮ ಹೆಸರು ಬರುವುದು ಪ್ರತಿಯೊಬ್ಬರಿಗೂ ಕನಸಿರುತ್ತದೆ . ನನಗೆ ಆತ್ಮವಿಶ್ವಾಸ ಇದೆ “ಎಂದು ಅವರು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಗೆ ಸಂದರ್ಶನವೊಂದರಲ್ಲಿ ಹೇಳಿದರು.

Leave a Reply