ಆಲ್ಕೋಹಾಲ್ ಪ್ರಭಾವದಿಂದಾಗಿ ಪುರುಷರು ಮಹಿಳೆಯರನ್ನು ಭೋಗದ ವಸ್ತುವನ್ನಾಗಿ ನೋಡುವ ಸಾಧ್ಯತೆ ಹೆಚ್ಚು ಎಂದು ಅಧ್ಯಯನ ಕಂಡು ಕೊಂಡಿದೆ.

ಅಮೆರಿಕದಲ್ಲಿ ನೆಬ್ರಸ್ಕಾ-ಲಿಂಕನ್ ವಿಶ್ವವಿದ್ಯಾನಿಲಯದ ಸಂಶೋಧಕರು ಕೆಲವೊಂದು ಸನ್ನಿವೇಶಗಳು ಮತ್ತು ಅಂಶಗಳ ಬಗ್ಗೆ ತನಿಖೆ ನಡೆಸಿ ಈ ವಿಷಯವನ್ನು ಗ್ರಹಿಸಿದ್ದಾರೆ. ಇದಕ್ಕಾಗಿ ಅವರು ಹಲವಾರು ಪುರುಷರನ್ನು ಅಧ್ಯಯನಕ್ಕಾಗಿ ಬಳಸಿದ್ದರು. ಈ ಅಧ್ಯಯನ ಅಂಶಗಳನ್ನು ಜರ್ನಲ್ ಸೆಕ್ಸ್ ರೋಲ್ಸ್ನಲ್ಲಿ ಪ್ರಕಟಿಸಲಾಗಿತ್ತು.

ಇಮೇಜ್-ಟ್ರಾಕಿಂಗ್ ತಂತ್ರಜ್ಞಾನದ ಮೂಲಕ ಮಹಿಳಾ ಶರೀರದ ಯಾವ ಭಾಗದ ಚಿತ್ರಗಳನ್ನು ಅವರು ದಿಟ್ಟಿಸಿ ನೋಡುತ್ತಾರೆ ಎಂಬುದನ್ನು ಗಮನಿಸಲಾಗಿದೆ. ಮಹಿಳೆಯ ಚಿತ್ರವನ್ನು ಮುಂದಿಟ್ಟು ಅಮಲು ಸೇವಿಸಿದ ಪುರುಷರ ನೋಟವನ್ನು ಆಧರಿಸಿ ಅಂದಾಜಿಸಿದಾಗ, ವಸ್ತುನಿಷ್ಠವಾಗಿ ಪ್ರಚೋದನೆಗೊಳಗಾದ ಅಂಶ ಬೆಳಕಿಗೆ ಬಂದಿದೆ. ಅವರು ಮುಖಗಳನ್ನು ನೋಡಲು ಕಡಿಮೆ ಸಮಯವನ್ನು ಕಳೆದಿದ್ದು, ಎದೆ ಮತ್ತು ಸೊಂಟದ ಮೇಲೆ ಬಹಳ ಸಮಯದವರೆಗೆ ನೋಟವನ್ನು ಕೇಂದ್ರೀಕರಿಸಿದರು. ಆಕರ್ಷಣೀಯತೆಯನ್ನು ಹೆಚ್ಚಿಸಿದ ಮಹಿಳೆಯರನ್ನು ನೋಡುವಾಗ ಹೆಚ್ಚು ಪ್ರಲೋಭನೆಗೆ ಒಳಗಾಗಿದ್ದಾರೆ ಎಂದು ಅಧ್ಯಯನ ತಿಳಿಸಿದೆ.

Leave a Reply