ಕರಾವಳಿ ಉತ್ಸವ ಉದ್ಘಾಟನೆ ಕಾರ್ಯಕ್ರಮ ಸಂದರ್ಭದಲ್ಲಿ ಅನುಮಾನಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬರ್ಕೆ ಪೋಲಿಸರು ಬಂಧಿಸಿದ್ದಾರೆ.

ಕರವಾಳಿ ಉತ್ಸವ‌ ಉದ್ಘಾಟನೆಗೆ ಅತಿಥಿಯಾಗಿ ಆಗಮಿಸಿರುವ ಖ್ಯಾತ ಚಲನಚಿತ್ರ ನಟ ಪ್ರಕಾಶ್ ರೈ ಅವರ ಕರವಾಳಿ ಉತ್ಸವ ಉದ್ಘಾಟನೆಯನ್ನು ತಡೆಯುವುದಾಗಿ ಕೆಲವು ಕಿಡಿಗೇಡಿಗಳು ಫೇಸ್‌ಬುಕ್‌ನಲ್ಲಿ ಸಂದೇಶ ಹರಿಡಿದ್ದರಿಂದ ಮೊಟ್ಟೆ ಎಸೆಯುವ ಸಾಧ್ಯತೆ ಬಗ್ಗೆ ಪೋಲಿಸರು ತೀವ್ರ ನಿಗಾ ವಹಿಸಿದ್ದರು. ಇದೇ ವೇಳೆಗೆ ಲತೀಶ್ ಎಂಬ ಯುವಕ ಚೀಲದಲ್ಲಿ ಮೊಟ್ಟೆ ಹಿಡಿದಿರುವುದನ್ನು ಗಮನಿಸಿದ ಪೋಲಿಸರು ತಮ್ಮ ವಶಕ್ಕೆ ಪಡೆದು ವಿಚಾರಣೆಯನ್ನು ನಡೆಸಿದ್ದಾರೆ.

Leave a Reply