ಬಿಜೆಪಿಯ ಪರಿವರ್ತನಾ ಯಾತ್ರೆಯ ಸಮಾವೇಶದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರವರು ಮಾತನಾಡುತ್ತಾ ಹನುಮನನ್ನು ಪೂಜಿಸುದಿಲ್ಲ, ಇಲ್ಲಿ ಟಿಪ್ಪು ಪೂಜಿಸಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದು, ಈ ಹೇಳಿಕೆಗೆ ನಟ ಪ್ರಕಾಶ್‌ ರಾಜ್‌ ಪ್ರತಿಕ್ರಿಯೆ ನೀಡಿದ್ದಾರೆ.

#justasking ಹ್ಯಾಷ್‌ಟ್ಯಾಗ್‌ ಮೂಲಕ ಟ್ವೀಟ್‌ ಪ್ರಕಾಶ್‌ ರಾಜ್‌ ಮಾಡಿದ್ದಾರೆ. ‘ಹನುಮನ ನಾಡು ಕರ್ನಾಟಕದಲ್ಲಿ ಟಿಪ್ಪು ಜಯಂತಿ ಆಚರಿಸಬೇಡಿ’ ಹೌದಾ!!
‘ಡಿಯರ್‌ ಸರ್‌, ಮತ್ತೆ ನಿಮ್ಮ ಅಜೆಂಡಾ ಏನು’ ಎಂದು ಪ್ರಕಾಶ್ ರಾಜ್‌ ಪ್ರಶ್ನಿಸಿದ್ದಾರೆ. ಈ ಟ್ವೀಟ್‌ನೊಂದಿಗೆ ಬಿಜೆಪಿ ನಾಯಕರಾದ ಬಿ.ಎಸ್‌.ಯಡಿಯೂರಪ್ಪ, ಜಗದೀಶ್‌ ಶೆಟ್ಟರ್‌, ಪಿ.ಸಿ.ಮೋಹನ್‌ ಅವರು ಟಿಪ್ಪು ಜಯಂತಿಯ ಆಚರಣೆಯಲ್ಲಿ ಭಾಗವಹಿಸಿದ್ದ ಚಿತ್ರಗಳನ್ನು ಲಗತ್ತಿಸಿದ್ದಾರೆ.

ಕರ್ನಾಟಕದ ನೆಲದಲ್ಲಿ ನೀವೇಕೆ ಸಾಮರಸ್ಯ ಕದಡುವ ದ್ವೇಷದ ಬೀಜಗಳನ್ನು ಬಿತ್ತುತ್ತಿದ್ದೀರಿ?, ನಾನು ಲಗತ್ತಿಸಿರುವ ಚಿತ್ರಗಳನ್ನು ಚನ್ನಾಗಿ ನೋಡಿ. ಸಮಾವೇಶದಲ್ಲಿ ನಿಮ್ಮ ಜತೆ ವೇದಿಕೆ ಹಂಚಿಕೊಂಡ ನಾಯಕರು ಕೆಲವು ವರ್ಷಗಳ ಹಿಂದೆ ಟಿಪ್ಪು ಜಯಂತಿಯನ್ನು ಎಷ್ಟು ಸಂತಸದಿಂದ ಆಚರಿಸಿದ್ದರು ಎಂದು ತಿಳಿಯುತ್ತದೆ. ಆಗ ಇಲ್ಲದ ನಿಮ್ಮ ತಕರಾರು, ಈಗೇಕೆ ಬಂತು’ ಎಂದು ಪ್ರಶ್ನೆಗಳನ್ನು ಎತ್ತಿದ್ದಾರೆ.

ಚುನಾವಣೆ ಎದುರಿಸಲು ಕೋಮಸಾಮರಸ್ಯ ಕದಡುವ ಇಂತಹ ವಿಷಯಗಳನ್ನು ಬಿಟ್ಟು, ಬೇರೆ ವಿಚಾರಗಳು ನಿಮಗೆ ಸಿಗುತ್ತಿಲ್ಲವೆ’ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Leave a Reply