ಇಲ್ಲ ಬುದ್ಧಿ ಹಲ್ಲುಗಳು ನಮ್ಮನ್ನು ಚುರುಕಾಗಿಸುವುದಿಲ್ಲ. ನಮ್ಮ ವಸಡುಗಳಲ್ಲಿ ಕೊನೆಯದಾಗಿ ಬರುವ ಹಲ್ಲುಗಳು ಬುದ್ಧಿ ಹಲ್ಲುಗಳಾಗಿವೆ. ಇವುಗಳು ಸುಮಾರು 17ರಿಂದ 21 ವಯಸ್ಸಿನವರಾದಾಗ ಬರುತ್ತವೆ. ಈ ಸಮಯದಲ್ಲಿ ನಾವು ಬುದ್ಧಿವಂತರೂ ಚುರುಕಾಗಿ ಕಾರ್ಯ ನಿರ್ವಹಿಸುವವರಾಗಿರುತ್ತೇವೆ. ಆದರಿಂದಲೇ ಅವುಗಳನ್ನು `ಬುದ್ಧಿ ಹಲ್ಲು’ಗಳೆಂದು ಕರೆಯಲಾಗುತ್ತದೆ. ಈ ಹಲ್ಲುಗಳು ಶಾಶ್ವತ ಅರೆಯುವ ಹಲ್ಲುಗಳಾಗಿವೆ. ಈ ಹಲ್ಲುಗಳು ನಮ್ಮ ವಸಡಿನ ಕೊನೆಯ ಭಾಗದಲ್ಲಿದ್ದು ನಾವು ಸೇವಿಸುವ ಆಹಾರವನ್ನು ಸಣ್ಣದಾಗಿ ಜಗಿಯಲು ಸಹಾಯಕವಾಗಿವೆ.

Leave a Reply