ನವದೆಹಲಿ: ಭಾರತದಲ್ಲಿರುವ ಕೋವಿಡ್ ಸಾಂಕ್ರಾಮಿಕ ರೋಗದ ಆರ್ಭಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಮೇರಿಕಾವು, ನಾಲ್ಕನೇ ಮಟ್ಟದ ಯಾತ್ರಾ ಸಲಹೆಗಳನ್ನು ನೀಡಿದೆ. ಮಾತ್ರವಲ್ಲ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಭಾರತಕ್ಕೆ ಪ್ರಯಾಣಿಸಬಾರದು ಹಾಗೂ ಭಾರತದಲ್ಲಿ ನೆಲೆಸಿರುವ ತನ್ನ ಪ್ರಜೆಗಳಿಗೆ ಆದಷ್ಟು ಬೇಗ ವಾಪಸ್ಸಾಗುವಂತೆ ಕರೆ ನೀಡಿದೆ.

ಅಮೇರಿಕಾದ ‘ದೂತವಾಸ ವ್ಯವಹಾರ ಕಛೇರಿಗಳ ಇಲಾಖೆ‘ಯು ಈ ಪ್ರಕಟಣೆಯನ್ನು ಹೊರಡಿಸಿದ್ದು, ಇದು ನಾಲ್ಕನೇ ಮಟ್ಟದ ಯಾತ್ರಾ ಸಲಹೆ ಎಂದರೆ ಅಮೇರಿಕಾದಿಂದ ಹೊರಡಿಸಲಾಗುವ ಅತ್ಯಂತ ಗರಿಷ್ಠ ಮಟ್ಟದ ಯಾತ್ರಾ ಸಲಹೆಯೆಂದು ಪರಿಗಣಿಸಲಾಗಿದೆ. ಕೋವಿಡ್ ಕಾರಣದಿಂದಾಗಿ ಭಾರತದಲ್ಲಿ ವೈದ್ಯಕೀಯ ಸೌಲಭ್ಯಗಳು ಅತ್ಯಂತ ಕಡಿಮೆ ಪ್ರಮಾಣದಲ್ಲಿವೆ ಎನ್ನುವುದನ್ನೂ ಇಲಾಖೆಯು ಬೊಟ್ಟು ಮಾಡಿದೆ.

ಈಗಾಗಲೇ ಬ್ರಿಟನ್ ಸರಕಾರವು ಭಾರತಕ್ಕಿರುವ ಪ್ರಯಾಣವನ್ನು ‘ಕೆಂಪು ಪಟ್ಟಿ‘ಗೆ ಸೇರಿಸಿದೆ. ಆಸ್ಟ್ರೇಲಿಯಾ ಕೂಡ ಭಾರತಕ್ಕೆ ಹೋಗದಂತೆ ತನ್ನ ಪ್ರಜೆಗಳಿಗೆ ನಿರ್ಬಂಧ ವಿಧಿಸಿದೆ.

Leave a Reply