ಮಥುರಾ: ಭಾರತದಲ್ಲಿ ಹುಟ್ಟಿದವರೆಲ್ಲ ಹಿಂದೂಗಳು ಎಂಬ ಸಮರ್ಥನೆಯಲ್ಲಿ ಯಾವುದೇ ಹುರುಳಿಲ್ಲ. ಅದರಿಂದ
ಸಮಾಜದ ಮೂಲ ರಚನೆಗೆ ತೊಡಕಾಗಬಹುದು ಎಂದು ದ್ವಾರಕಾ–ಶಾರದಾ ಪೀಠದ ಸ್ವಾಮಿ ಸ್ವರೂಪಾನಂದ ಸರಸ್ವತಿ ಹೇಳಿದ್ದಾರೆ.
ಭಾರತದಲ್ಲಿ ಜನಿಸಿದವರೆಲ್ಲರೂ ಹಿಂದೂಗಳು ಎಂಬ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ವೇದಗಳು ಮತ್ತು ಶಾಸ್ತ್ರಗಳಲ್ಲಿ ನಿಜವಾದ ಹಿಂದೂ ನಂಬಿಕೆ ಇದೆ, ಮುಸ್ಲಿಮರು ಖುರಾನ್ ಮತ್ತು ಹದೀತ್, ಕ್ರೈಸ್ತರು ಬೈಬಲ್ ಅನ್ನು ಓದುತ್ತಾರೆ ಎಂದು ಹೇಳಿದರು.
ಅಯೋಧ್ಯಾ ದೇವಸ್ಥಾನದ ವಿವಾದದಲ್ಲಿ, ರಾಜಕೀಯ ಪಕ್ಷಗಳಿಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವ ಹಕ್ಕು ಇಲ್ಲ.
ಕೇವಲ ಶಂಕರಾಚಾರ್ಯರ ಯತಿಗಳಿಗೆ ಮತ್ತು ಧರ್ಮಚಾರ್ಯರಿಗೆ ಅಯೋಧ್ಯೆಯಲ್ಲಿ ದೇವಸ್ಥಾನ ನಿರ್ಮಿಸುವ ಹಕ್ಕಿದೆ ಎಂದು ಶಂಕರಾಚಾರ್ಯರು ಹೇಳಿದರು.

ಭಾರತವು ಜಾತ್ಯತೀತ ರಾಷ್ಟ್ರವಾಗಿರುವುದರಿಂದ ಸರ್ಕಾರ ದೇಗುಲ ನಿರ್ಮಿಸಬಾರದು ಎಂದು ಅವರು ಹೇಳಿದ್ದಾರೆ.

Leave a Reply