ಮಂಗಳೂರಿನ ತೊಕ್ಕೋಟು ಗ್ರೀನ್ ಸಿಟಿ ಸಮುಚ್ಛಯದಲ್ಲಿ (ಯುನಿಟಿ ಹಾಲ್ ಎದುರು) ಸುಸಜ್ಜಿತ ಸೈಕಲ್ ಮತ್ತು ಗಿಫ್ಟ್ ಸಂಟರ್ ಇಂದು (24-12-2017) ಉದ್ಘಾಟಿಸಲ್ಪಟ್ಟಿತು. ಸೈಕಲ್ ವಿಭಾಗವನ್ನು ಬಂಟ್ವಾಳ ಅರ್ಲದ ನಿವೃತ್ತ ಮುಖ್ಯೋಪಾಧ್ಯಾಯ ಹಾಜಿ ಮುಹಮ್ಮದ್ ಮಾಸ್ಟರ್ ಹಾಗೂ ಗಿಫ್ಟ್ ವಿಭಾಗವನ್ನು ಅಲೇಕಲ ಅಲ್ ಫುರ್ಖಾನ್ ಜುಮಾ ಮಸೀದಿಯ ಅಧ್ಯಕ್ಷರಾದ ಜನಾಬ್ ಫಾರೂಖ್ ಬಿ. ಹೆಚ್. ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ದುವ್ವಾ ನೆರವೇರಿಸಿ ಹಿತ ವಚನ ನೀಡಿದ ಬೋಳಂಗಡಿ ಹವ್ವಾ ಜುಮ್ಮಾ ಮಸೀದಿಯ ಖತೀಬರಾದ ಜನಾಬ್ ಯಾಹ್ಯಾ ತಂಙಲ್‌ರವರು, ವ್ಯಾಪಾರ ಕೇವಲ ಲಾಭಗಳಿಸುವ ವ್ಯವಹಾರವಾಗದೆ ಪ್ರಾಮಾಣಿಕ ಸೇವಾ ಭಾವನೆಯ ಕೇಂದ್ರವೂ ಆಗಬೇಕು ಮತ್ತು ಹಿಂದು ಮುಸ್ಲಿಮ್ ಕ್ರಿಶ್ಚನರ ಸೌಹಾರ್ದ ತಾಣವೂ ಆಗಬೇಕೆಂದು ಕರೆ ನೀಡಿದರು.

ಜನಾಬ್ ಜಬ್ಬರ್ ಉಸ್ತಾದ್ ಮಿತ್ತಬೈಲ್, ತಾಜ್ ಸೈಕಲ್ ಕಂಪನಿಯ ಮಾಲಕ ಮುತ್ತಲಿಬ್, ಕರ್ನಾಟಕ ರಾಜ್ಯ ಆಹಾರ ಆಯೋಗದ ಸದಸ್ಯ ಬಿ. ಎ. ಮುಹಮ್ಮದ್ ಆಲಿ, ಜಮಿಯ್ಯತುಲ್ ಫಲಾಹ್‌ದ ಮಾಜಿ ಜಿಲ್ಲಾಧ್ಯಕ್ಷ ಪಿ. ಬಿ. ಎ. ರಝಾಕ್, ಸ್ಥಳೀಯ ಕೌನ್ಸಿಲರ್ ಉಸ್ಮಾನ್ ಕಲ್ಲಾಪು, ತಾಜ್ ಸೈಕಲ್ ಕಂಪನಿಯ ಪಿಆರ್‌ಒ ಶೈಖ್ ಇಸ್ಮಾಯಿಲ್ ಮುಬೀನ್ ಮತ್ತು ಸಚಿವ ಯು. ಟಿ. ಖಾದರ್‌ರವರ ಆಪ್ತ ಕಾರ್ಯದರ್ಶಿ ಮುಹಮ್ಮದ್ ಲಿಬ್‌ಝತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮಂಗಳೂರು ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ಆಗಮಿಸಿ ಶುಭ ಹಾರೈಸಿದರು. ಬೈಸಿಕಲ್ ಮತ್ತು ಗಿಫ್ಟ್ ಸೆಂಟರಿನ ಮಾಲಕ ಹಾಮದ್ ಅಲ್ತಾಫ್ ಮುಂಡಾಜೆ ಎಲ್ಲರನ್ನೂ ಭರಮಾಡಿಕೊಂಡು ಧನ್ಯವಾದ ಸಲ್ಲಿಸಿದರು

Leave a Reply