ಸಂತನೊಂದಿಗೆ ಕಡಲ ತೀರದಲ್ಲಿ ವಿಹಾರಕ್ಕೆ ಹೊರಟಾಗ ಕೆಲವು ಪಾಠಗಳು ಕಲಿಯಲು ಸಿಕ್ಕಿತ್ತು.
ಕಡಲ ತೀರದಲ್ಲಿ ನಡೆಯುವಾಗ ಕಲ್ಲೊಂದು ಕಾಣಸಿಕ್ಕಿತ್ತು. ಎತ್ತಿ ಸಮುದ್ರಕ್ಕೆ ಬಿಸಾಡಲು ಮನಸ್ಸು ತೋಚಿತು. ಸಂತನ ಭಯದಲ್ಲಿ ಹಾಗೆ ಮಾಡಲಿಲ್ಲ, ಸ್ವಲ್ಪ ದೂರ ನಡೆದು ಕುಳಿತು ಕೊಂಡೆವು. ಸಂತ ತನ್ನ ಉಪದೇಶ ಕೊಡಲು ಶುರು ಮಾಡಿದರು.

ಸಂತ: ನಾವು ನಡೆಯುತ್ತಾ ಇರುವಾಗ ಒಂದು ಕಲ್ಲು ಇತ್ತು ಗಮನಿಸಿದ್ದಿಯಾ?

ಶಿಷ್ಯ: ಹೌದು ಗುರು ನಾನು ನೋಡಿದೆ

ಸಂತ: ಅದನ್ನು ನೋಡಿ ನಿನ್ನ ಮನಸಿನಲ್ಲಿ ಏನೂ ಮೂಡಲಿಲ್ಲವೇ?

ಶಿಷ್ಯ: ಅದನ್ನು ಎತ್ತಿ ಸಮುದ್ರಕ್ಕೆ ಬಿಸಾಡುವ ಎಂದು ಮನಸ್ಸಿನಲ್ಲಿ ಅಂದು ಕೊಂಡೆ.

ಸಂತ: ಅದರ ಸ್ವಲ್ಪ ಮುಂದೆ ಒಂದು ಹಕ್ಕಿ ಗರಿ ಇತ್ತು, ಅದನ್ನು ನೋಡಲಿಲ್ಲವೇ? ಅದನ್ನು ಹಾಗೆ ಬಿಸಾಡುವ ಯೋಚನೆ ಬರಲಿಲ್ಲವೇ?

ಶಿಷ್ಯ: ಹೌದು ನೋಡಿದೆ, ಆದರೆ ಅದನ್ನು ಬಿಸಾಡುವ ಮನಸ್ಸು ಬರಲಿಲ್ಲ.

ಸಂತ: ಖಂಡಿತ ಬರುದಿಲ್ಲ, ಯಾಕೆಂದರೆ ಗರಿಯನ್ನು ಬಿಸಾಡಿದರೆ ಅದು ಮತ್ತೆ ಹಿಂದಕ್ಕೆ ಬರುತ್ತದೆ. ಇದರಲ್ಲಿ ನಮಗೆ ಪಾಠವಿದೆ. ನಮ್ಮ ಮನಸ್ಸನ್ನು ಗರಿಯಂತೆ ಹಗುರಗೊಳಿಸಬೇಕು. ಆಗ ಯಾರಿಗೂ ನಮಗೆ ನೋವು ಕೊಡಲು ಸಾಧ್ಯವಿಲ್ಲ. ಕಲ್ಲಿನಂತೆ ಗಟ್ಟಿ ಮಾಡಿದರೆ ಸುಲಭದಲ್ಲಿ ನೋವು ಬರುತ್ತದೆ…

Leave a Reply