ಭಾರತ ಶೀಘ್ರದಲ್ಲೇ ತನ್ನ ಮೊದಲ ಸಮುದ್ರ ಸೇತುವೆಯ ರನ್‌ವೇ ಪಡೆಯಲು ಸಿದ್ಧವಾಗಿದೆ, ಲಕ್ಷದ್ವೀಪದ ಅಗಾಟ್ಟಿ ವಿಮಾನ ನಿಲ್ದಾಣವನ್ನು ವಿಸ್ತರಿಸಲು ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ (ಎಎಐ) ದಿಂದ ಅನುಮತಿ ನೀಡಲಾಗಿದೆ. ದೊಡ್ಡ ವಿಮಾನಗಳನ್ನು ನಿರ್ವಹಿಸಲು ಬೀಚ್ ಮತ್ತು ಆಳವಿಲ್ಲದ ಪ್ರದೇಶದಲ್ಲಿ RCC ಪ್ಲಾಟ್ ಫಾರ್ಮನ್ನು ನಿರ್ಮಿಸುವ ಮೂಲಕ ರನ್‌ವೇ ವಿಸ್ತರಿಸಲಾಗುವುದು ಎಂದು ವರದಿಯಾಗಿದೆ.

ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ (ಎಎಐ) ಮೊದಲು ಸೂಚಿಸಿದ ಯೋಜನೆ ಎರಡು ದ್ವೀಪಗಳನ್ನು ಸೇರಿಸಿ ರನ್‌ವೇ ಯನ್ನು ವಿಸ್ತರಿಸುವುದು.
“ಪರಿಸರೀಯ ಕಾಳಜಿ ಕಾರಣದಿಂದ ಯೋಜನೆಯಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದೆ” ಎಂದು ಎಎಐ ಅಧಿಕಾರಿ ಟೈಮ್ಸ್ ಆಫ್ ಇಂಡಿಯಾಕ್ಕೆ ಹೇಳಿಕೆ ಕೊಟ್ಟಿದಾರೆ.

ಇಡೀ ಯೋಜನೆ, ಕಡಲತೀರದೊಳಗೆ ಕಂಬಗಳನ್ನು ನಿಲ್ಲಿಸುವ ಮತ್ತು ಆಳವಿಲ್ಲದ ಸಮುದ್ರ ಪ್ರದೇಶದಲ್ಲಿ ಆರ್.ಸಿ.ಸಿ ಪ್ಲಾಟ್ ಫಾರ್ಮನ್ನು ನಿರ್ಮಿಸುವುದಾಗಿದೆ ಮತ್ತು ಯೋಜನೆಗೆ ಸುಮಾರು 1,500 ಕೋಟಿ ರೂ. ವೆಚ್ಚವಾಗಲಿದೆ ಎಂದು ಅವರು ತಿಳಿಸಿದರು.

ಒಮ್ಮೆ ಪೂರ್ಣಗೊಂಡರೆ, ATR-72 ಕಾರ್ಯನಿರ್ವಹಿಸಲು ರನ್‌ವೇ ಸಾಕಷ್ಟು ಉದ್ದವಾಗಿರುತ್ತದೆ. ಪ್ರಸ್ತುತ, ಅಲ್ಲಿ ಕೇವಲ ಸಣ್ಣ ಟರ್ಬೊಪ್ರಾಪ್ಸ್ ಮಾತ್ರ ಕಾರ್ಯನಿರ್ವಹಿಸುತ್ತವೆ “ಎಂದು ತನ್ನ ಹೇಳಿಕೆಯಲ್ಲಿ ಸೇರಿಸಿದರು.

Leave a Reply