ಬೆಂಗಳೂರು: ಬೆಂಗಳೂರಿನ ಹೇರೋಹಳ್ಳಿಯ ವಿಘ್ನೇಶ್ವರ ಲೇಔಟ್ ನಿವಾಸಿಗಳು ಅಚಾನಕಾಗಿ ಸಂಕಷ್ಟಕ್ಕೀಡಾಗಿದ್ದಾರೆ. ಹಲವು ಕಾಲಗಳಿಂದ ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಬಳಸುತ್ತಿದ್ದ ರಸ್ತೆಯಲ್ಲಿ ರಾತ್ರೋ ರಾತ್ರಿ ಕಾಂಪೌಂಡ್ ಕಟ್ಟಲಾಗಿದೆ. ಪ್ರಭಾವಿ ಮಾಜಿ ಪೊಲೀಸ್ ಅಧಿಕಾರಿಯೊಬ್ಬರು ಈ ಕಾಂಪೌಂಡ್ ಕಟ್ಟಿಸಿದ್ದು ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.ಇದರಿಂದ ಕೆರಳಿದ ಜನ ತಾವೇ ಕಾಂಪೌಂಡ್ ಕೆಡವಿ ಹಾಕಿದರು.

ನಿವೃತ್ತ ಡಿಸಿಪಿ ಎಲ್‍ಜಿ ಕೃಷ್ಣಪ್ಪ ಖರೀದಿಸಿರೋ ಈ ಸೈಟ್‍ನಲ್ಲಿ ಒಟ್ಟು ಎರಡು ರಸ್ತೆಗಳು ಬರುತ್ತವೆ. ಆದ್ದರಿಂದ ಈ ಕ್ರಮ ಕೈಗೊಂಡಿದ್ದೇನೆ ಎಂದು ಅವರು ಹೇಳಿದ್ದಾರೆ.
ಈ ಎರಡು ರಸ್ತೆಗಳನ್ನ ಮುಚ್ಚಿರೋ ಸೈಟ್ ಮಾಲೀಕರು ಓಡಾಡಕ್ಕೆ ರಸ್ತೆ ಬಿಡದೆ ಸಾರ್ವಜನಿಕರಿಗೆ ತೊಂದರೆ ಕೊಡುತ್ತಾರೆ ಎಂಬುದು ಜನರ ಆರೋಪ.

ನಮಗೆ ರಸ್ತೆಗೆ ಅವಕಾಶ ನೀಡದಿದ್ದರೆ ಎಷ್ಟೇ ಕಾಂಪೌಂಡ್ ಹಾಕಿದರೂ ನಾವು ಕೆಡುವುತ್ತೇವೆ ಎಂದು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ. ಆದರೆ ಸೈಟ್ ಮಾಲೀಕರು ಈ ಸೈಟ್ ನನ್ನದು, ರಸ್ತೆ ಬಿಡುವ ಪ್ರಶ್ನೆಯೇ ಇಲ್ಲ ಎಂದು ತನ್ನ ಕೃತ್ಯವನ್ನು ಸಮರ್ಥಿಸುತ್ತಾರೆ.

Leave a Reply