ನಾನು: ಒಂದೇ ವಿಚಾರದಲ್ಲಿ ಜೊತೆಗೂಡಿದ ನಾವು ಒಂದೇ ತಾಯಿಯ ಮಕ್ಕಳಂತೆ ಇದ್ದೆವು. ಕಾರಣವೇನೆಂದು ಗೊತ್ತಿಲ್ಲ, ಈಗ ನನ್ನನು ನಿರ್ಲಕ್ಷಿಸುತ್ತಾ ಇದ್ದಾರೆ. ದುಃಖದ ಜೊತೆ ಕೋಪವು ಬರುತ್ತಿದೆ. ಏನು ಮಾಡಲಿ ಗುರುಗಳೇ?

ಸಂತ: ಒಂದೇ ವಿಚಾರದಲ್ಲಿ ಜೊತೆಗೂಡಿದವರು ವಿಚಾರ ಬೇರೆ ಬೇರೆ ಆದಾಗ ನಂಟು ಒಡೆಯುತ್ತದೆ.
ಮನುಷ್ಯರಲ್ಲಿ ಕೆಲವರು ಸುಂದರ ಗಿಳಿಯಂತೆ. ಪ್ರೀತಿಯೆಂಬ ಪಂಜರದಲ್ಲಿ ಇಟ್ಟು ಸಾಕಿದಾಗ ನಮ್ಮ ಧಾಟಿಯಲ್ಲೇ ಮಾತನಾಡುತ್ತಾರೆ. ಒಮ್ಮೆ ಪಂಜರದ ಬಾಗಿಲು ತೆರೆದಾಗ ಮತ್ತೆ ನಮ್ಮ ನೆನಪೇ ಇರುವುದಿಲ್ಲ.

ಇನ್ನು ಕೆಲವರು ಪಾರಿವಾಳದ ಹಾಗೆ. ಪರವೂರಿಗೆ ಹೋಗಿ ಬಿಟ್ಟು ಬಂದರೂ ನಮ್ಮ ಮನದ ವಿಶ್ವಾಸ ಎಂಬ ಹಂಚಿನಲ್ಲಿ ಮತ್ತೆ ಬಂದು ಕುಳಿತುಕೊಳ್ಳುತ್ತಾರೆ.
ಕೇಳು ಮಗುವೇ, ಹಾರುವ ಹಕ್ಕಿ ತನ್ನ ಜೊತೆಯಲ್ಲೇ ಇರಬೇಕು ಎನ್ನುವ ಸ್ವಾರ್ಥ ಬೇಡ. ಹಾರಿದ್ದು ಗಿಳಿಯಾಗಿದ್ದರೆ ಮರೆತು ಬಿಡು. ಪಾರಿವಾಳವಾಗಿದ್ದರೆ ಆಕಾಶದ ಎತ್ತರಕ್ಕೆ ಹಾರಿದರೂ ಇಳಿಯುವುದು ನಮ್ಮ ಛಾವಣಿಯಲ್ಲೇ….

ಲೇಖಕರು ಮೀಡಿಯೇಟರ್

Leave a Reply