ತಮಿಳು, ಮಲಯಾಳಂ ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ಅಭಿನಯಿಸಿದ ಖ್ಯಾತ ನಟಿ ನಮಿತಾ ಇಂದು ಹಸೆಮಣೆಯೇರಿದ್ದು, ನಿರ್ಮಾಪಕ, ನಟ ಮಲ್ಲಿರೆಡ್ಡಿ ವಿರೇಂದ್ರ ಚೌಧರಿ ಅವರೊಂದಿಗೆ ಪ್ರಖ್ಯಾತ ತಿರುಪತಿಯ ಇಸ್ಕಾನ್ ದೇಗುಲದಲ್ಲಿ ಮದುವೆಯಾದರು. ಮುಂಜಾನೆ 5.30ಕ್ಕೆ ಮಾಂಗಲ್ಯಧಾರಣೆ ನಡೆಯಿತು. ರಾಧಿಕಾ-ಶರತ್ ಕುಮಾರ್ ಸೇರಿದಂತೆ ಸಿನಿಜಗತ್ತಿನ ಗಣ್ಯರು ನವಜೋಡಿಗೆ ಶುಭ ಹಾರೈಸಿದರು. ಮದುವೆಯ ಖುಷಿಯಲ್ಲಿಯೂ ಅಭಿಮಾನಿಗಳನ್ನು ಮರೆಯದ ನಮಿತಾ, ‘ನನಗೆ ಈವರೆಗೆ ನೀಡಿರುವ ಬೆಂಬಲಕ್ಕೆ ಕೃತಜ್ಞತೆಗಳು. ನಮ್ಮ ದಾಂಪತ್ಯ ಜೀವನಕ್ಕೆ ಶುಭಹಾರೈಸಿ’ ಎಂದು ಕೋರಿದ್ದಾರೆ.

Leave a Reply