ಹೈದರಾಬಾದ್: ದೇಶದ ಅತಿ ಕಿರಿಯ ಐಪಿಎಸ್ ಅಧಿಕಾರಿಯಾಗಿ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಧರ್ಮಮಾಬಾದ್ ವಿಭಾಗದ ಎಸಿಪಿ ಆಗಿ ನೂರುಲ್ ಹಸನ್ ನೇಮಕಗೊಂಡಿದ್ದಾರೆ.

22 ವರ್ಷ ವಯಸ್ಸಿನ ನೂರುಲ್ ಹಸನ್ ಉತ್ತರ ಪ್ರದೇಶದ ಪೀಲಿಬೆತ್ ಜಿಲ್ಲೆಯವರಾಗಿದ್ದಾರೆ. ಈ ಸಾಧನೆಗೈದ ದೇಶದ ಮೊದಲ‌ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅವರು ಸರ್ಕಾರಿ ಶಾಲೆಯಲ್ಲಿ 8 ನೇ ತರಗತಿಯವರೆಗೆ ಅಧ್ಯಯನ ಮಾಡಿದರು. 10 ನೇ ತರಗತಿ ಪಾಸಾದ ಬಳಿಕ ತಂದೆಯ ಜೊತೆಗೆ ರಾಯ್ಬರೇಲಿಗೆ ಹೋದರು ಮತ್ತು ಹಿಂದಿ ಮಾಧ್ಯಮದ ಮೂಲಕ ಇಂಟರ್ ಮೀಡಿಯೇಟ್ ಅನ್ನು ಕಲಿತ ನಂತರ, ಬಿ.ಟೆಕ್‌ಗಾಗಿ 2009 ರಲ್ಲಿ ಅಲಿಗಢ ಮುಸ್ಲಿಮ್ ವಿಶ್ವವಿದ್ಯಾಲಯ ಸೇರಿದರು.

ಅಲಿಗಢ ಮುಸ್ಲಿಮ್ ವಿಶ್ವವಿದ್ಯಾಲಯದಲ್ಲಿ ಅವರು ತಮ್ಮ ಇಂಗ್ಲೀಷ್ ಭಾಷೆಯನ್ನು ಸುಧಾರಿಸಿ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳ ಕುರಿತಾದ ಅಭಿಪ್ರಾಯಗಳನ್ನು ವಿನಿಮಯ ಮಾಡಲು ಬಳಸಿದ 10 ಸ್ನೇಹಿತರ ಜೊತೆಗೆ ಅವರು ವೇದಿಕೆಯನ್ನು ಸ್ಥಾಪಿಸಿ ಅಣಕು ಸಂದರ್ಶನಗಳನ್ನು ನಡೆಸುತ್ತಿದ್ದರು. 14 ತಿಂಗಳು ಸೀಮೆನ್ಸ್ ಕಂಪನಿಯಲ್ಲಿ ಮತ್ತು ಒಂದು ವರ್ಷದ ಪರಮಾಣು ಶಕ್ತಿ ಆಯೋಗದಲ್ಲಿ ಸೇವೆ ಸಲ್ಲಿಸಿದ್ದಾರೆ.

2013 ರಲ್ಲಿ ಅವರು ಯುಪಿಎಸ್‌ಸಿ ಸಿವಿಲ್ ಸರ್ವಿಸ್ ಪರೀಕ್ಷೆಗೆ (ಸಿಎಸ್ಇ) ಸಿದ್ಧತೆಗಳನ್ನು ಪ್ರಾರಂಭಿಸಿದ ಅವರು ಯುಪಿಎಸ್ಸಿ ಸಿಇಇ-2014 ರಲ್ಲಿ 625 ನೇ ಸ್ಥಾನ ಪಡೆದಿದ್ದಾರೆ.

Leave a Reply