ಬೆಂಗಳೂರು: ಪ್ರೀತಿ ಪ್ರೇಮದ ಹೆಸರಿನಲ್ಲಿ ಅದೆಷ್ಟೇ ಮೋಸ ಹೋದರು ಜನರು ಎಚ್ಚೆತ್ತುಕೊಳ್ಳುವುದಿಲ್ಲ. ಅದರಲ್ಲೂ ಕೆಲವರು ಮುಗ್ಧ ಹುಡುಗಿಯರನ್ನು ಬಲೆಗೆ ಬೀಸಿ ಮೋಸ ಮಾಡಲೆಂದು ಪ್ರೀತಿ ಎಂಬ ಮುಖವಾಡವನ್ನು ಧರಿಸುತ್ತಾರೆ. ಅಂಥದ್ದೇ ‘ಲವ್ ಚೀಟ್’ ಪ್ರಕರಣವೊಂದು ನಗರದ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.

ವಿನೋದ್ ಎಂಬ ವ್ಯಕ್ತಿ, ಯುವತಿ ಮತ್ತು ಅಪ್ರಾಪ್ತ ಬಾಲಕಿಗೆ ಮೋಸ ಮಾಡಿದ ಓರ್ವ ಕಾಮುಕ. ವಿನೋದ್ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂವರು ಯುವತಿಯರಿಗೆ ಇದೇ ರೀತಿಯಲ್ಲಿ ಮೋಸ ಮಾಡಿದ್ದಾನೆ. ಇತ್ತೀಚೆಗೆ ಥಣಿಸಂದ್ರ ನಿವಾಸಿಯ (ಪ್ರೇಮ ಹೆಸರು ಬದಲಾಯಿಸಲಾಗಿದೆ) ಎಂಬ ಬಾಲಕಿಯನ್ನು ಕರೆದುಕೊಂಡು ಪರಾರಿಯಾಗಿದ್ದ.

ಪ್ರೇಮ ಪೋಷಕರು ಮೂಲತಃ ಪಶ್ಚಿಮ ಬಂಗಾಳದ ನಿವಾಸಿಗಳು. ಬೆಂಗಳೂರು ನಗರಕ್ಕೆ ಬಂದು ಸುಮಾರು 10 ವರ್ಷಗಳಾಗಿದ್ದು, ಅಪಾರ್ಟ್ ಮೆಂಟ್ ನಲ್ಲಿ ಸೆಕ್ಯೂರಿಟಿ ಕೆಲಸ ಮಾಡಿಕೊಂಡಿದ್ದಾರೆ. ಪ್ರೇಮ ಅಲ್ಲೇ ಖಾಸಗಿ ಶಾಲೆಯಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ವಿನೋದ್ ಬಾಲಕಿಯ ಎದುರು ಮನೆಯಲ್ಲಿ ವಾಸವಾಗಿದ್ದನು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಪ್ರೇಮಳೊಂದಿಗೆ ಮಾತನಾಡುತ್ತಿದ್ದನು. ಈ ಸಂಬಂಧ ಪ್ರೇಮ ಪೋಷಕರಿಗೆ ತಿಳಿದು ಎಚ್ಚರಿಸಿದ್ದರು.

ಡಿಸೆಂಬರ್ 02 ರಂದು ಪ್ರೇಮ ಶಾಲೆಗೆ ರಜಾ ಹಾಕಿ ಮನೆಯಲ್ಲಿಯೇ ಉಳಿದ್ದಳು. ಪೋಷಕರು ಎಂದಿನಂತೆ ತಮ್ಮ ಕೆಲಸಕ್ಕೆ ತೆರಳಿದ ಬಳಿಕ ವಿನೋದ್ ಆಕೆಯನ್ನು ಕರೆದುಕೊಂಡು ಪರಾರಿಯಾಗಿದ್ದ. ಇದರ ಕುರಿತಾಗಿ ಪೋಷಕರು ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಅಪಹರಣ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ವಿನೋದನ ಪತ್ತೆಗೆ ವಿಶೇಷ ಜಾಲ ಬೀಸಿದ್ದಾರೆ.

Leave a Reply