ಗಂಡ ಹೆಂಡತಿಯ ಪ್ರೀತಿ ದೈವದತ್ತವಾದುದು. ಅನಿರೀಕ್ಷಿತವಾಗಿ ಒಂದಾಗುವ ಜೋಡಿಗಳು ಬಳಿಕ ಜೀವನಪೂರ್ತಿ ಒಬ್ಬರನ್ನೂಬ್ಬರು ಬಿಟ್ಟಿರಲಾಗದಷ್ಟು ಆತ್ಮೀಯರಾಗಿ ಬಿಡುವುದು ನಿಜಕ್ಕೂ ಅದ್ಭುತವೇ ಸರಿ. ಮದುವೆಯಾಗಿ ಅರುವತ್ತು ವರ್ಷಗಳ ಬಳಿಕ ಪರಸ್ಪರ ಬೇರ್ಪಟ್ಟ ವೃದ್ಧ ದಂಪತಿಗಳ ಪುನರ್ಮಿಲನ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ವೈರಲ್ ಆಗಿದೆ.

ಅಮೆರಿಕದ ಫ್ಲೋರಿಡಾದ ಜೋಸೆಫ್ ಮತ್ತು ಈವ್ ದಂಪತಿಗಳು ಮದುವೆಯ ಬಳಿಕ ಮೊದಲ ಬಾರಿಗೆ 215 ದಿನಗಳ ಕಾಲ ಪರಸ್ಪರ ದೂರವಾಗಿದ್ದರು. ಯಾಕೆಂದರೆ ಜೋಸೆಫ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಅವರು ಸುಮಾರು ಏಳು ತಿಂಗಳಿಂದ ನಿಗಾ ಘಟಕದಲ್ಲಿದ್ದರು. ಅವರು ಪರಸ್ಪರ ಭೇಟಿಯಾಗುವಂತಿರಲಿಲ್ಲ. ಈಗ ಗುಣಮುಖರಾಗಿ ಹೊರ ಬರುವಾಗ ಪರಸ್ಪರ ಭೇಟಿಯಾಗುತ್ತಿರುವ ವಿಡಿಯೋ ವೈರಲ್ ಆಗಿದೆ. ವೀಡಿಯೊದಲ್ಲಿ, ಇಬ್ಬರು ಆಲಂಗಿಸಿ ‘ಐ ಲವ್ ಯು’ ಮತ್ತು ಮಿಸ್ ಯೂ’ ಎಂದು ಭಾವನಾತ್ಮಕವಾಗಿ ಹೇಳುತ್ತಾರೆ.

ವಿಡಿಯೋ ನೋಡಿ

Leave a Reply