ಸಾಧಾರಣವಾಗಿ ಪ್ರೇಮಿಗಳು ರಕ್ತದಲ್ಲಿ ಪತ್ರವನ್ನು ಬರೆಯುವ, ಕೈಗಳ ಮೇಲೆ ಹಚ್ಚೆ ಹಾಕಿಸಿಕೊಳ್ಳುವ ಸುದ್ದಿಯನ್ನು ಎಲ್ಲರೂ ಕೇಳಿರಬಹುದು. ಆದರೆ ಸುಪ್ರೀಂ ಕೋರ್ಟಿಗೆ 100 ಪತ್ರಗಳನ್ನು ರಕ್ತದಲ್ಲಿ ಬರೆದು ಚೀನಾ ಮಾದರಿ ಎರಡು ಮಕ್ಕಳ ನೀತಿ ರೂಪಿಸುವ ಮೂಲಕ ಜನಸಂಖ್ಯೆಯನ್ನು ನಿಯಂತ್ರಿಸಬೇಕೆಂದು ಕೋರಿ ಮೀರತ್ ನ ಹಿಂದು ಸ್ವಾಭಿಮಾನ ಸೇನಾ ಮನವಿ ಮಾಡಿದೆ. ಸಂಸತ್ತಿನಲ್ಲಿ ಶಹರನ್ಪುರ್ ಬಿಜೆಪಿ ಶಾಸಕ ರಾಘವ್ ಲಕನ್ಪಾಲ್ ರವರು ಎರಡು ಮಕ್ಕಳ ನೀತಿಯನ್ನು ಜಾರಿಗೊಳಿಸಬೇಕೆಂದು ಇರಿಸಿದ ಬೇಡಿಕೆಯು ತಿರಸ್ಕೃತಗೊಂಡ ಬೆನ್ನಿನಲ್ಲಿ ಮೀರತ್ ಶಾಖೆಯು 100 ಪತ್ರಗಳನ್ನು ರಕ್ತದಲ್ಲಿ ಬರೆದು ಎಸ್ ಸಿ ಗೆ ಜನಸಂಖ್ಯೆ ನಿಯಂತ್ರಣ ಕ್ಕೆ ಚೀನಾ ಮಾದರಿಯ ನೀತಿಯನ್ನು ರೂಪಿಸಬೇಕೆಂದು ಪತ್ರದಲ್ಲಿ ಉಲ್ಲೇಖಿಸಿದೆ.
ಪತ್ರಗಳನ್ನು ಭಾನುವಾರ ದೇವಾಲಯಗಳಲ್ಲಿ ನೀಡಲಾಗುವ ತರಬೇತಿ ಶಿಬಿರಗಳಲ್ಲಿ ಬರೆಸಲಾಗಿರುವುದಾಗಿ ಮೀರತ್ ಹಿಂದೂ ಸ್ವಾಭಿಮಾನ ಸೇನಾ ಶಾಖೆಯು ಘೋಷಿಸಿಕೊಂಡಿದ್ದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಮೋಹನ್ ಭಾಗವತ್ ರವರಿಗೂ ರಕ್ತದಲ್ಲಿ ಬರೆದ ಪತ್ರಗಳನ್ನು ಕಳುಹಿಸಲಾಗಿದೆ ಎಂದು ತಿಳಿಸಿದೆ.

Leave a Reply