ಋತುಚಕ್ರ ಸಂದರ್ಭದಲ್ಲಿ ಮಹಿಳೆಯರು ಧರಿಸುವ ಸ್ಯಾನಿಟರಿ ಪ್ಯಾಡ್ಗೆ ಜಿ 12% ಜಿಎಸ್ಟಿ ಆಗಿರುವ ಹಿನ್ನೆಲೆಯಲ್ಲಿ ಪ್ರತಿಭಟನಾತ್ಮಕವಾಗಿ 1000 ಸಾವಿರ ಪ್ಯಾಡ್ ಗಳನ್ನು ಮೋದಿಗೆ ರವಾನಿಸಲು ಮಧ್ಯ ಪ್ರದೇಶದ ಗ್ವಾಲಿಯರ್ನ ವಿದ್ಯಾರ್ಥಿಗಳ ತಂಡವು ತೀರ್ಮಾನ ಮಾಡಿದ್ದಾರೆ.

ಮುಟ್ಟಿನ ಸಂಬಂಧಿಸಿದ ತಮ್ಮ ಪರಿಸ್ಥಿತಿಯನ್ನು ಮನಗಾಣಿಸಲು ಸ್ಯಾನಿಟರಿ ಪ್ಯಾಡ್ ನಲ್ಲಿ ಮಹಿಳೆಯರು ತಮ್ಮ ಅಭಿಪ್ರಾಯವನ್ನು ಬರೆದು ಮೋದಿಯವರಿಗೆ ಕಳುಹಿಸಬೇಕೆಂದು ವಿದ್ಯಾರ್ಥಿಗಳು ಅಭಿಯಾನ ಮೂಲಕ ಮನವಿ ಮಾಡಿದ್ದಾರೆ.
ತಮ್ಮ ಅಭಿಪ್ರಾಯವನ್ನು ಬರೆದು ನಮಗೆ ನೀಡಿದರೆ ನಾವು ಒಟ್ಟು ಮಾಡಿ ಕಳುಹಿಸುತ್ತೇವೆ ಎಂದು ಹೇಳಿದ್ದಾರೆ.

ಗ್ರಾಮೀಣ ಮಹಿಳೆಯರು ನೂರು ರೂಪಾಯಿ ಕೊಟ್ಟು ಪ್ಯಾಡ್ ಖರೀದಿಸಲು ಸಾಧ್ಯವಿಲ್ಲ. ಆದ್ದರಿಂದ ಅವರಿಗೆ ಸಮಸ್ಯೆ ಆಗುತ್ತದೆ ಎಂದು ವಿದ್ಯಾರ್ಥಿ ಪ್ರೀತಿ ಜೋಷಿ ಹೇಳಿದ್ದಾರೆ.

ಜನವರಿ 4 ರಂದು ಪ್ರಾರಂಭವಾದ ಈ ಅಭಿಯಾನಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ.

Leave a Reply