Naxal attack in Maharashtra's Gadchiroli | Photo Credit: Times Now

ಗಡ್‍ಚಿರೋಳಿ: ಮಹಾರಾಷ್ಟ್ರದ ನಕ್ಸಲ್ ಪ್ರದೇಶ ಗಡ್‍ಚಿರೋಳಿ ಜಿಲ್ಲೆಯಲ್ಲಿ ನಕ್ಸಲರು ಹೆದ್ದಾರಿಯಲ್ಲಿ ನೆಲಬಾಂಬ್ ಸ್ಫೋಟಿಸಿದ ಪರಿಣಾಮ 15 ಕಮಾಂಡೋಗಳು ಹುತಾತ್ಮರಾಗಿದ್ದು, ಅನೇಕರು ಗಾಯಗೊಂಡಿದ್ದಾರೆ. ವಾಹನ ತೆರಳುತ್ತಿದ್ದ ಮಾರ್ಗದ ಮಧ್ಯೆ ನಕ್ಸಲರು ದೊಡ್ಡ ಕಲ್ಲುಗಳನ್ನು ಇಟ್ಟು ಸಂಚಾರಕ್ಕೆ ಅಡ್ಡಿಪಡಿಸಿದ್ದರು. ಯೋಧರು ವಾಹನದಿಂದ ಕೆಳಗಿಳಿದು ಪರಿಶೀಲಿಸುತ್ತಿದ್ದ ಸಂದರ್ಭದಲ್ಲಿ ಮರೆಯಲ್ಲಿ ಅವಿತಿಟ್ಟುಕೊಂಡಿದ್ದ ನಕ್ಸಲರು ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಿಸಿದರು ಎಂದು ವರದಿಯಾಗಿದೆ.

ಇದೇ ಸಂದರ್ಭದಲ್ಲಿ ಯೋಧರು ಮತ್ತು ಮಾವೋವಾದಿಗಳ ನಡುವೆ ಭಾರೀ ಗುಂಡಿನ ಚಕಮಕಿ ನಡೆದು 15 ಯೋಧರು ಹುತಾತ್ಮರಾಗಿದ್ದಾರೆ. ನಕ್ಸಲರು ಮೊದಲು ರಸ್ತೆಕಾಮಗಾರಿ ಮಾಡುತ್ತಿದ್ದ 27 ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಬಳಿಕ ಕಾರ್ಯಾಚರಣೆಗಿಳಿದ ಕಮಾಂಡೋಗಳನ್ನು ಗುರಿಯಾಗಿರಿಸಿಕೊಂಡು ರಸ್ತೆಯಲ್ಲಿ ಐಇಡಿ ಸ್ಫೋಟ ನಡೆಸಿದ್ದಾರೆ.

Leave a Reply