ನಿರಂತರ ಆರು ಗಂಟೆಗಳ ಕಾಲ PUBG ಆಡಿದ ಪರಿಣಾಮವಾಗಿ 16 ವರ್ಷದ ಬಾಲಕ ಹೃದಯಾಘಾತವಾಗಿ ಮೃತಪಟ್ಟ ಘಟನೆ ಮಧ್ಯಪ್ರದೇಶದ ನೀಮಚ್ನಲ್ಲಿ ವರದಿಯಾಗಿದೆ.
12 ನೇ ತರಗತಿಯ ವಿದ್ಯಾರ್ಥಿ ಫುರ್ಖಾನ್ ಖುರೇಷಿ ಮೃತ ಪಟ್ಟ ದುರ್ದೈವಿ. ಆತನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ವೈದ್ಯರು ಆತ ಮೃತ ಪಟ್ಟಿರುವುದಾಗಿ ದೃಢ ಪಡಿಸಿದರು. PUBG ಆಡಿದ ಪರಿಣಾಮವಾಗಿ ಹೃದಯಾಘಾತ ಆಗಿರಬಹುದು ಎಂದು ಅಂದಾಜಿಸಲಾಗಿದೆ. “ತೀವ್ರ ಹೃದಯಾಘಾತದಿಂದ ಈ ಸಾವು ಸಂಭವಿಸಿರುವ ಸಾಧ್ಯತೆ ಇದೆ. ಯಾಕೆಂದರೆ ಇಂತಹ ಗೇಮ್ ಗಳನ್ನೂ ಮಕ್ಕಳು ನಿರಂತರ ಹೆಚ್ಚು ಗಂಟೆಗಳ ಆಡುವಾಗ ಅವರು ಹಲವಾರು ರೀತಿಯ ಸಿಂಡ್ರೋಮ್ ಗಳಿಗೆ ತುತ್ತಾಗುತ್ತಾರೆ. ಅಂತಹ ಸಿಂಡ್ರೋಮ್ ಗಳಿಂದ ಅವರಿಗೆ ಹೊರ ಬರಲು ಸಾಧ್ಯ ಆಗುವುದಿಲ್ಲ. ಹೀಗೆ ಹೃದಯಕ್ಕೆ ಹಾನಿಯುಂಟಾಗುತ್ತದೆ” ಎಂದು ಕಾರ್ಡಿಯಾಲಜಿಸ್ಟ್ ಡಾ. ಅಶೋಕ್ ಜೈನ್ ಅಭಿಪ್ರಾಯ ಪಟ್ಟಿದ್ದಾರೆ.

Leave a Reply