ಬಾಗಲಕೋಟೆ: ಈಗ ಹದಿನಾರರ ಹರೆಯದ ಮುಸ್ಲಿಂ ಬಾಲಕಿ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ರಾಷ್ಟ್ರ ಮಟ್ಟದ ಚಿನ್ನದ ಪದಕ ಪಡೆದು ಕೊಂಡಿದ್ದಾಳೆ.

ಗ್ರಾಮೀಣ ಬಾಲಕಿ ಖುಷ್ಬು ಮುರ್ತಿಸಾಬ್ ಹವಾಲ್ದಾರ್ ಜಿಲ್ಲೆಯ ಹುನಗುಂದ ಪಟ್ಟಣದ ವಿಜಯ ಮಹಾಂತೇಶ್ ಪ್ರೌಢಶಾಲೆಯ 10ನೇ ತರಗತಿಯಲ್ಲಿ ಕಲಿಯುತ್ತಿದ್ದಾರೆ.

ಈಕೆ ಬೆಳಗಾವಿ ವಿಭಾಗದಿಂದ ಕರ್ನಾಟಕವನ್ನು ಪ್ರತಿನಿಧಿಸಿ ರಾಷ್ಟ್ರಮಟ್ಟದ ಯೋಗಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಯೋಗ ಸಾಧನೆಗೆ ರಾಷ್ಟ್ರ ಮಟ್ಟದಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ.

ಖುಷ್ಬು ಯೋಗ ಸಾಧನೆಗೆ ಮುಖ್ಯ ಕಾರಣ ವಿಜಯ ಮಹಾಂತೇಶ್ ಪ್ರೌಢಶಾಲೆಯ ದೈಹಿಕ ತರಬೇತಿ ಶಿಕ್ಷಕರಾದ ಎಂಎಸ್ ಮಾವಿನಕಾಯಿ. ಇವರು ಯೋಗದಲ್ಲಿ ಎಂ.ಫಿಲ್ ಮಾಡಿದ್ದು, , ಅವರು ಖುಷ್ಬು ಸೂಕ್ತ ತರಬೇತಿ ನೀಡಿದ್ದಾರೆ ಎಂದು ಶಾಲಾ ಮುಖ್ಯ ಶಿಕ್ಷಕ ದಯಾನಂದ್ ಪಾಟೀಲ್ ಹೇಳಿದ್ದಾರೆ.

ದೈಹಿಕ ಆರೋಗ್ಯ ಸಮಸ್ಯೆ ಸುಧಾರಿಸಲು ಪ್ರಾರಂಭಿಸಿದ ಯೋಗ ನಂತರ ಅಭ್ಯಾಸವಾಗಿ ಹೋಯಿತು. ಇದೀಗ ಆಕೆ ಮತ್ತು ಆಕೆಯ ಕುಟುಂಬಕ್ಕೆ ಈ ಯೋಗವು ಹೊಸ ಸಂತಸದ ಯೋಗವನ್ನು ಸೃಷ್ಟಿಸಿದೆ.

Leave a Reply