Athletics - 2018 Asian Games - Men's Javelin Throw, Final - GBK Main Stadium, Jakarta, Indonesia - August 27, 2018 - Neeraj Chopra of India in action. REUTERS/Issei Kato

ಏಷ್ಯನ್ ಕ್ರೀಡಾಕೂಟದ ಪಂದ್ಯಾವಳಿಯಲ್ಲಿ ಭಾರತವು ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಆಗಸ್ಟ್ 18 ರಿಂದ ಸೆಪ್ಟಂಬರ್ 02 ರವರೆಗೆ ಇಂಡೋನೇಷ್ಯಾದ ಜಕಾರ್ತಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ನಲ್ಲಿ ಭಾರತವು ಏಳು ಚಿನ್ನ, ಹನ್ನೆರಡು ಬೆಳ್ಳಿ ಮತ್ತು ಇಪ್ಪತ್ತು ಕಂಚಿನ ಪದಕಗಳೊಂದಿಗೆ ಏಷ್ಯಾದಲ್ಲಿ ಪ್ರಬಲ ರಾಷ್ಟ್ರ ಎಂಬುದನ್ನು ಸಾಬೀತು ಪಡಿಸಿದೆ.

ಜವೆಲಿನ್ ತ್ರೋ ನಲ್ಲಿ 88.03 ಮೀಟರ್ನಲ್ಲಿ ನೀರಾಜ್ ಚೋಪ್ರಾ ಸೋಮವಾರ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದರು. ಅವರು ತಮ್ಮ ಹಿಂದಿನ ರಾಷ್ಟ್ರೀಯ ದಾಖಲೆಯನ್ನು ಮುರಿದರು. ಇಪ್ಪತ್ತು ವರ್ಷದ ತರುಣ ನೀರಜ್ ಏಷ್ಯನ್ ಗೇಮ್ಸ್ ಇತಿಹಾಸದಲ್ಲೇ ಜಾವಲಿನ್ ತ್ರೋ ನಲ್ಲಿ ಚಿನ್ನ ಗೆದ್ದ ಮೊದಲ ಕ್ರೀಡಾ ಪಟು. ಈ ಹಿಂದೆ 1982 ರಲ್ಲಿ ಹೊಸದಿಲ್ಲಿ ಏಷ್ಯಾಡ್ ನಲ್ಲಿ ಗುರುತೇಜ್ ಸಿಂಗ್ ಕಂಚಿನ ಪದಕ ಗೆದ್ದಿದ್ದರು.

ಹರಿಯಾಣದ ಪಾಣಿಪತ್ ಸಮೀಪದ ಖಾಂದ್ರಾದ ಬಡ ರೈತ ಕುಟುಂಬದಲ್ಲಿ ಹುಟ್ಟಿದ ನೀರಜ್ ಚೋಪ್ರಾ, ಗ್ರಾಮದಲ್ಲಿ ಜಾವಲಿನ್ ತ್ರೋ ಮಾಡುವ ಹಿರಿಯ ಆಟಗಾರರಿಂದ ಪ್ರೇರಣೆ ಪಡೆದು ತಾನೂ ಅಭ್ಯಾಸ ಆರಂಭಿಸಿದರು. 2011ರಿಂದ ನಾಲ್ಕು ವರ್ಷಗಳ ಕಾಲ ಪಂಚ ಕುಲದಲ್ಲಿರುವ ಕ್ರೀಡಾ ಪ್ರಾಧಿಕಾರದ ದೇವಿ ಲಾಲ್ ಸ್ಟೇಡಿಯಂ ನಲ್ಲಿ ಅಭ್ಯಾಸ ಮಾಡಿದರು.ವಿವಿಧ ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ವರು ರಾಷ್ಟ್ರದ ಗಮನ ಸೆಳೆದರು. ಪೋಲೆಂಡ್ ನಲ್ಲಿ ನಡೆದ ವಿಶ್ವ 20 ರ ವಯೋಮಿತಿ ಸ್ಪರ್ಧೆಯಲ್ಲಿ ವಿಶ್ವ ದಾಖಲೆ ಮಾಡಿದರು. ಬಳಿಕ ಏಷ್ಯನ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಚೀನಾ ಗೆದ್ದರು. 2018ರಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾ ಕೂಟದಲ್ಲಿ ಚಿನ್ನ ಗೆದ್ದು ಭಾರತಕ್ಕೆ ಜಾವಲಿನ್ ತ್ರೋ ನಲ್ಲಿ ಚಿನ್ನ ತಂದು ಕೊಟ್ಟ ಮೊತ್ತ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.


ಜೇವನದ ಹಲವು ಏಳು ಬೀಳುಗಳನ್ನು ಕಂಡ ನೀರಜ್ ತನ್ನ ಆತ್ಮವಿಶ್ವಾಸದಿಂದ ಈ ಸಾಧನೆ ಮಾಡಿದ್ದಾರೆ. ೨೦೧೭ ರಲ್ಲಿ ಲಂಡನ್ ವಿಶ್ವ ಅಥ್ಲೆಟಿಕ್ ನಲ್ಲಿ ಫೈನಲ್ ತಲುಪಲು ಅವರು ವಿಫಲ ಆದದ್ದು ಅವರನ್ನು ಕೆಲ ಕಾಲ ಖಿನ್ನರಾನ್ನಗಿಸಿತ್ತು. ಯಾವುದಕ್ಕೂ ಜಗ್ಗದ ನೀರಜ್ ತನ್ನ ಮುಂದಿನ ಹಾದಿಯನ್ನು ತಾನೇ ಕಂಡು ಕೊಂಡರು
ಜಾನ್ ಝೆಲೆನ್ಸಿಯವರ ಯೌಟ್ಯೂಬ್ ವಿಡಿಯೋ ಮೂಲಕ ನೀರಜ್ ಸಾಕಷ್ಟು ತಂತ್ರಗಳನ್ನು ಕಲಿತಿದ್ದಾರೆ. ಪೋಲೆಂಡ್ ಸ್ಪಲದಲ್ಲಿ ಆಸ್ಟ್ರೇಲಿಯನ್ ಕೋಚ್ ಗ್ಯಾರಿ ಕಾಲ್ವೇರ್ಟ್ ಅವರಿಂದ ನೀರಜ್ ತರಬೇತಿ ಪಡೆದಿದ್ದಾರೆ. ಅವರು ತನ್ನ ಗೆಲುವನ್ನು ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಅರ್ಪಿಸಿದ್ದಾರೆ.

Leave a Reply