ನವದೆಹಲಿ: ದೇಶೀಯ ಮತ್ತು ಅಂತರರಾಷ್ಟ್ರೀಯ ಆಹಾರಕ್ಕೆ ಭಾರತದಲ್ಲಿ ಹೆಚ್ಚು ಹೆಚ್ಚು ಬೇಡಿಕೆ ಇದೆ. ಈಗ ಜನರು ತಮಗೆ ಬೇಕಾದ ಆಹಾರ ತಿಂಡಿ ತಿನಿಸುಗಳನ್ನು ಆನ್ಲೈನ್ನಲ್ಲಿ ತರಿಸುತ್ತಾರೆ. 2017 ಆನ್ಲೈನ್ ನಲ್ಲಿ ಆರ್ಡರ್ ಮಾಡಿದ ಪಟ್ಟಿಯಲ್ಲಿ ಚಿಕನ್ ಬಿರಿಯಾನಿಗೆ
ಅಗ್ರ ಸ್ಥಾನ ಸಿಕ್ಕಿದೆ. ಅಂದರೆ ಜನರು ಬಿರಿಯಾನಿಯನ್ನು ಹೆಚ್ಚು ಇಷ್ಟ ಪಡುತ್ತಾರೆ.

ಆಹಾರ ಮತ್ತು ಡೆಲಿವರಿ ಪ್ಲ್ಯಾಟ್ಫಾರ್ಮ್ ಸ್ವಿಗ್ಗಿ 2017 ರ ವಿಶ್ಲೇಷಣೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಮುಂಬೈ, ದೆಹಲಿ-ಎನ್ಸಿಆರ್, ಹೈದರಾಬಾದ್, ಬೆಂಗಳೂರು, ಪುಣೆ, ಚೆನ್ನೈ ಮತ್ತು ಕೋಲ್ಕತಾ ಈ ಏಳು ನಗರಗಳಲ್ಲಿ ಜನರು ಮಾಡಿದ ಆರ್ಡರ್ ಹಿನ್ನೆಲೆಯಲ್ಲಿ ಈ ವಿಶ್ಲೇಷಣೆ ನಡೆದಿದೆ.

ಸ್ವಿಗ್ಗಿ ವಿಶ್ಲೇಷಣೆಯ ಪ್ರಕಾರ, ಮಸಾಲಾ ದೋಸಾ, ಬೆಣ್ಣೆ ನಾನ್, ತಂದೂರಿ ರೋಟಿ ಮತ್ತು ಪನೀರ್ ಬಟರ್ ಮಸಾಲಾ ಇವು ಕ್ರಮವಾಗಿ 2017 ರಲ್ಲಿ ಅತಿ ಹೆಚ್ಚು ಆರ್ಡರ್ ಗಳಿಸಿದ ಐದು ಖಾದ್ಯಗಳು.

Leave a Reply