ಅಬುಧಾಬಿ: ಊರಿನಿಂದ ಗಲ್ಫ್ ರಾಷ್ಟ್ರಕ್ಕೆ ಎಷ್ಟೋ ಮಂದಿ ಕೆಲಸ ಅರಸಿ ಹೋಗುತ್ತಾರೆ. ಕೆಲವರು ಸಫಲರಾದರೆ ಇನ್ನು ಕೆಲವರು ವಿಫಲರಾಗುತ್ತಾರೆ. ಆದರೆ ಇಲ್ಲೊಂದು ಕುಟುಂಬ ಜೀವನ ಪರ್ಯಂತ ಕೂತು ತಿನ್ನುವಷ್ಟು ಹಣವನ್ನು ಲೆಟೆಸ್ಟ್ ಬಿಗ್ ಟಿಕೆಟ್ ಅದೃಷ್ಟ ಚೀಟಿ ಮುಖಾಂತರ ಜಾಕ್‌ಪಾಟ್ ಗಳಿಸಿದೆ.

ಕೇರಳ ಮೂಲದ ಹರಿಕೃಷ್ಣನ್ ಎಂಬವರಿಗೆ ಭಾರತೀಯ ರೂಪಾಯಿ ಸರಿ ಸುಮಾರು ‌21 ಕೋಟಿ ರೂಪಾಯಿಗಳಷ್ಟು ಬಂಪರ್ ಜಾಕ್‌ಪಾಟ್ ಹೊಡೆದಿದೆ.‌ ಹರಿಕೃಷ್ಣನ್ ಅವರಿಗೆ ಪೋನ್ ಕರೆ ಮುಖಾಂತರ ವಿಷಯ ಮುಟ್ಟಿಸಿದಾಗ ಅವರು ಅದನ್ನು ತಿರಸ್ಕರಿಸಿದ್ದರು. ಇತ್ತೀಚಿನ ದಿನಗಳಲ್ಲಿ ‌ಪ್ರಾಂಕ್ ಕರೆಗಳು ಹೆಚ್ಚಾಗಿ ಬರುವುದರಿಂದ ಅವರಿಗೆ ನಂಬಿಕೆ ಬರಲಿಲ್ಲ ಎಂದು ಅವರು ಹೇಳುತ್ತಾರೆ.

ಏನಿದು ಡ್ಯೂಟಿ ಫ್ರೀ ರೇಫೆಲ್?

ಅಬುಧಾಬಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತಿ ತಿಂಗಳು ಐದನೆಯ ತಾರೀಖಿನಿಂದ ಮುಂದಿನ ತಿಂಗಳ ಮೂರನೆಯ ತಾರೀಖಿನವರೆಗೆ ಬಿಗ್ ಟಿಕೆಟ್ ರೇಫೆಲ್ ಎಂಬ ಅದೃಷ್ಟದಾಟ ಇರುತ್ತದೆ. ಡ್ಯೂಟಿ ಫ್ರೀ ವಿಭಾಗದಲ್ಲಿ ಬಿಗ್ ಟಿಕೆಟ್ ಎಂಬ ಕೌಂಟರ್ ಬಳಿ ಹೋಗಿ, ಅಲ್ಲಿ ಸ್ರ್ಕೀನ್ ಮೇಲೆ ಕಾಣಿಸುವ ಒಂದು ನಂಬರನ್ನು 500 ಯುಎಯಿ ದಿರ್ಹಾಮ್ ಕೊಟ್ಟು ಆಯ್ದುಕೊಳ್ಳಬೇಕು. ಪ್ರತಿ ತಿಂಗಳು 5ರಂದು ಡ್ರಾಗೊಂಡು ಅದೇ ದಿನ ಜಯಶಾಲಿಗಳಿಗೆ ಮಾಹಿತಿಯನ್ನು ನೀಡುತ್ತಾರೆ. ಈ ಈ ಹಿಂದೆ ಬಹಳಷ್ಟು ಕೇರಳಿಗರು, ದಕ್ಷಿಣ ಕನ್ನಡದ ಜನತೆಯೂ ಇದಕ್ಕೆ ಸೇರಿದ್ದಾರೆ.

Leave a Reply