ವಾಷಿಂಗ್ಟನ್‌: ಅಮೆರಿಕದ ಚುನಾಯಿತ ಅಧಕ ಜೋ ಬೈಡನ್, ಶ್ವೇತಭವನ ಹಿರಿಯ ಸಿಬ್ಬಂದಿ ಹುದ್ದೆಗಳಿಗೆ ಹೊಸಬರನ್ನು ನೇಮಕ ಮಾಡಿದ್ದಾರೆ. ಬೈಡನ್, ತಮ್ಮ ಪತ್ನಿ ಜೆಲ್ ಬೈಡನ್ ಅವರ ನೀತಿ ಸಲಹೆಗಾರ ಹುದ್ದೆಗೆ ಕರ್ನಾಟಕ ಮೂಲದ ಮಾಲಾ ಅಡಿಗ ಅವರನ್ನು ಆಯ್ಕೆ ಮಾಡಿರುವುದು ವಿಶೇಷವಾಗಿದೆ.

ಇಲಿನಾಯ್ ನಿವಾಸಿಯಾಗಿರುವ ಮಾಲಾ ಅವರು ಬೈಡನ್- ಕಮಲಾ ಚುನಾವಣಾ ಪ್ರಚಾರ ತಂಡದ ಸಲಹೆಗಾರ್ತಿಯಾಗಿ ಕಾರ್ಯ ನಿರ್ವಹಿಸಿದ್ದರು. ಅದಕ್ಕೂ ಮುಂಚೆ ಅವರು ಬೈಡನ್‌ರಿಗೆ ಹಿರಿಯ ಸಲಹೆಗಾರ್ತಿಯಾಗಿದ್ದರು. ಶ್ವೇತಭವನದ ನೂತನ ಸಿಬ್ಬಂದಿಗಳ ಹೆಸರುಗಳನ್ನು, ಬೈಡನ್ ಬಹಿರಂಗಪಡಿಸಿದ್ದಾರೆ.

Leave a Reply