ದಕ್ಷಿಣ ಕಾಶ್ಮೀರ, ಡಿ.29: ಇಲ್ಲಿಗೆ ಸಮೀಪದ ಲೆವದೋರಾದಲ್ಲಿ ಸದ್ಭಾವನೆ ಮತ್ತು ಸಾಹೋದರ್ಯವನ್ನು ಬಿಂಬಿಸುವ ಮಹತ್ವದ ಘಟನೆಯೊಂದು ಬೆಳಕಿಗೆ ಬಂದಿದೆ. ಒಂದು ಮುಸ್ಲಿಮ್ ಕುಟುಂಬ ನೆರೆಯ 4 ಅನಾಥ ಹಿಂದೂ ಮಕ್ಕಳನ್ನು ದತ್ತು ತೆಗೆದು ಕೊಳ್ಳುವ ನಿರ್ಧಾರಕ್ಕೆ ಬಂದಿದೆ.
ಈ ಮಕ್ಕಳ ತಾಯಿ 40 ವರ್ಷದ ಬೇಬಿ ಕೌಲ್ ಶನಿವಾರ ನಿಧನ ಹೊಂದಿದರು. ಇದಕ್ಕಿಂತ ಒಂದು ವರ್ಷ ಮೊದಲು ಅವರ ಪತಿ ನಿಧನರಾಗಿದ್ದರು. ಅವರು ಗುತ್ತೆದಾರನಾಗಿ ಕೆಲಸ ಮಾಡುತ್ತಿದ್ದರು. ಬಹಳ ಕಾಲದಿಂದ ಅವರು ಮಧುಮೇಹ ರೋಗದಿಂದ ಬಳಲುತ್ತಿದ್ದರು. ಕೌಲ್‍ರ ನಿಧನದ ಬಳಿಕ ಅವರ 15 ಮತ್ತು 16 ವರ್ಷ ಹೆಣ್ಣು ಮಕ್ಕಳು, 15 ಮತ್ತು 7 ವರ್ಷದ ಗಂಡು ಮಕ್ಕಳು ಅನಾಥವಾಗಿದ್ದರು. ಅವರ ಬಳಿ ತಲೆ ಮೇಲೆ ಒಂದು ಸೂರನ್ನು ಬಿಟ್ಟರೆ ಬೇರೇನೂ ಇರಲಿಲ್ಲ.
ಕೌಲ್‍ರಿಗೆ ಸರಕಾರ ಒಂದು ಬ್ಯಾಂಕ್‍ನಲ್ಲಿ ನೌಕರಿ ಕೊಟ್ಟಿತ್ತು. ಇದರಿಂದ ಅವರು ತಮ್ಮ ಮಕ್ಕಳನ್ನು ಸಾಕುತ್ತಿದ್ದರು. ಆದರೆ, ಕೆಲಸ ಸಿಕ್ಕಿ ಮೂರು ತಿಂಗಳಲ್ಲಿ ಅವರು ನಿಧ£ Àಹೊಂದಿದ್ದಾರೆ. ಇಷ್ಟು ಕಡಿಮೆ ವಯಸ್ಸಿನಲ್ಲಿ ದುಃಖದ ಬೆಟ್ಟವೇ ಮಕ್ಕಳ ಮೇಲೆ ಬಿದ್ದಿತ್ತು. ಗ್ರಾಮಸ್ಥರು ಅವರಿಗೆ ನೆರವಾಗಲು ನಿರ್ಧರಿಸಿದ್ದಾರೆ.
ಕಾಶ್ಮೀರದ ಈ ಘಟನೆ ಅಲ್ಲಿ ನೂರಾರು ವರ್ಷಗಳಿಂದ ಮುಂದುವರಿಯುತ್ತಿರುವ ಹಿಂದೂ ಮುಸ್ಲಿಮ್ ಒಗ್ಗಟ್ಟನ್ನು ತೋರಿಸುತ್ತಿದೆ. ಕೌಲ್‍ರ ಅಂತಿಮ ಸಂಸ್ಕಾರದಲ್ಲಿ ನೂರಾರು ಮಂದಿ ಸೇರಿದ್ದರು. ಅಪ್ರಾಪ್ತ ವಯಸ್ಸಿನ ಅವರ ಅಂತಿಮಸಂಸ್ಕಾರ ಕ್ರಿಯೆಯನ್ನು ಸಂಪೂರ್ಣ ಹಿಂದೂ ಪದ್ಧತಿಯಂತೆ ನೆರವೇರಿಸಿದ್ದಾರೆ. ಇದಕ್ಕಾಗಿ ಗ್ರಾಮಸ್ಥರು ಹಿಂದೂ ಧರ್ಮದ ಜನರಿಂದ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿದ್ದರು.
ನೆರೆಯ ಮುಹಮ್ಮದ್ ಯೂಸುಫ್ ಹೇಳುತ್ತಾರೆ. ಅವರ ತಂದೆ ಮೃತರಾದಾಗ ನಾವು 6 ಕ್ವಿಂಟಲ್ ಅಕ್ಕಿ 80 ಸಾವಿರ ರೂಪಾಯಿ ಸಂಗ್ರಹಿಸಿದ್ದೆವು. ನಾವು ಹೆಣ್ಣು ಮಕ್ಕಳ ಹೆಸರಿನಲ್ಲಿ ಎರಡು ಖಾತೆ ಆರಂಭಿಸಿದೆವು. ಇದರಲ್ಲಿ 55 ಸಾವಿರ ರೂಪಾಯಿಯಂತೆ ಜಮೆ ಮಾಡಿದ್ದೇವೆ. ನಾವು ಅವರ ಮನೆ ದುರಸ್ಥಿಯನ್ನು ಕೂಡಾ ಮಾಡಿದೆವು. ನಾವು ಇದನ್ನು ಇನ್ನೊಮ್ಮೆ ಮಾಡ ಬಯಸುತ್ತಿದ್ದೇವೆ.
ಕೌಲರ್ ನಾಲ್ಕು ಮಕ್ಕಳಲ್ಲಿ ಮೀನಾಕ್ಷಿ ದೊಡ್ಡವರು. ಅವರ ತಮ್ಮ ಒಂಬತ್ತನೆ ತರಗತಿ, ಎರಡನೆ ಪುತ್ರಿ ಸಪ್ನಾ ಪ್ರಾಥಮಿಕ ಶಾಲೆಯಲ್ಲಿ ಮತ್ತು ರೋಹಿತ್ ಮೂರನೆ ತರಗತಿಯಲ್ಲಿ ಕಲಿಯುತ್ತಿದ್ದಾನೆ.
ಅವರ ಚಿಕ್ಕಮ್ಮ ಮಕ್ಕಳನ್ನು ಜಮ್ಮುನ ಜಗತಿ ಗ್ರಾಮಕ್ಕೆ ಹೋಗಲು ಹೇಳಿದ್ದಾರೆ. ಬಹಳಷ್ಟು ಜನರು ಈಗ ಅಲ್ಲಿನ ಶಿಬಿರದಲ್ಲಿದ್ದಾರೆ. ಯಾಕೆಂದರೆ ಅಲ್ಲಿ ನೆರವು ಸಾಮಗ್ರಿಯನ್ನು ವಿತರಿಸಲಾಗುತ್ತಿದೆ.

Leave a Reply