ರಾಸ್ ಶ್ಯಾಡಿಕ್ ತನ್ನ ಮನೆಯಲ್ಲಿ ಕ್ರಿಸ್ಮಸ್ ವೃಕ್ಷದ ದೀಪಗಳನ್ನು ಹಾಕುವಾಗ ಈ ದೀಪಗಳು ತನಗಿಂತ ದಶಕದಷ್ಟು ವಯಸ್ಸಿನಲ್ಲಿ ಹಿರಿಯದು ಎಂಬ ಹೆಗ್ಗಳಿಕೆಗೆ ಹೆಮ್ಮೆ ಪಡುತ್ತಾನೆ.
ಇಂಗ್ಲೆಂಡಿನ ಪ್ಲೇಮೌತ್ನಲ್ಲಿ ವಾಸಿಸುತ್ತಿರುವ 38 ವರ್ಶದ ಶ್ಯಾಡಿಕ್ ಹೇಳಿಕೆಯ ಪ್ರಕಾರ 1969 ರಲ್ಲಿ ಅವರ ತಾಯಿ 3 ಪೌಂಡ್ಸ್‌ಗೆ ಖರೀದಿ ಮಾಡಿದ ಕ್ರಿಸ್ಮಸ್ ದೀಪಗಳನ್ನು ಅವರು ಇಂದಿಗೂ ಉಪಯೋಗಿಸುತ್ತಿದ್ದಾರೆ. ಅಚ್ಚರಿಯ ವಿಷಯವೇನೆಂದರೆ ಅದರಲ್ಲಿ ಒಂದು ಬಲ್ಬ್ ಕೂಡ ಬದಲಾಯಿಸುವ ಅವಶ್ಯಕತೆ ಬರಲಿಲ್ಲವಂತೆ.

ಬ್ರಿಟಿಷ್ ನ್ಯೂಸ್ ಏಜೆನ್ಸಿ ಸೌತ್ ವೆಸ್ಟ್ ನ್ಯೂಸ್ ಸರ್ವಿಸಿಗೆ ಶ್ಯಾಡಿಕ್ ಕೊಟ್ಟ ಹೇಳಿಕೆಯಂತೆ ದೀಪಗಳನ್ನು ಖರೀದಿ ಮಾಡುವಾಗ ಬಲ್ಬುಗಳ ಒಂದು ಬಿಡಿ ಸೆಟ್ಟಿನೊಂದಿಗೆ ಬಂದರು ಕೂಡ ಬುಲ್ಬುಗಳನ್ನು ಬದಲಿಸುವ ಅವಶ್ಯಕತೆ ಬರಲಿಲ್ಲ

ಶ್ಯಾಡಿಕ್ ಈಗಾಗಲೇ 48 ವರ್ಷ ಕಳೆದಿರುವ ದೀಪಗಳ 50ನೇ ವರ್ಷಾಚರಣೆ ಮಾಡುವ ಉತ್ಸುಕದಲ್ಲಿ ಇದ್ದಾನೆ ಅದ್ಕಕಾಗಿ ದೀಪಗಳನ್ನು ಬಹಳ ಜಾಗರೂಕತೆಯಿಂದ ನೋಡಿಕೊಳ್ಳುತಿದ್ದಾನೆ
ದೀಪಗಳನ್ನು ಆಗಾಗ ತೆಗೆದಿಡುವದನ್ನು ತಪ್ಪಿಸಲು ಪ್ಲಾಸ್ಟಿಕ್ ಮರವೊಂದಕ್ಕೆ ವರ್ಷವಿಡೀ ಸುತ್ತಿ ಇಡುವ ಶ್ಯಾಡಿಕ್ ‘ತನ್ನ ಕೋಣೆಯಲ್ಲಿಯೇ ಅದನ್ನು ಇಡುತ್ತೇನೆ ವರ್ಷ ಕಳೆದಂತೆ ಜಾಗರೂಕತೆಯನ್ನು ಹೆಚ್ಚಿಸುತ್ತಾ ಇದ್ದೆನೆ’ ಎಂದು ಹೇಳುತ್ತಾನೆ.
ಸುಮಾರು 30,000 ಗಂಟೆಗಳ ಹಬ್ಬದ ಖುಷಿಯನ್ನು ನೀಡಿರುವ ದೀಪಗಳು ಒಂದಲ್ಲ ಒಂದು ದಿನ ಬದಲಾಯಿಸ ಬೇಕಾಗಬಹುದು ಎಂದು ತಿಳಿದಿರುವ ಶ್ಯಾಡಿಕ್‌ಗೆ ದೀಪದ ತಂತಿಯ ಸುತ್ತಲಿನ ಪ್ಲಾಸ್ಟಿಕ್ ಕ್ಷೀಣಿಸಲು ಪ್ರಾರಂಭವಾದದ್ದು ಸಮಸ್ಯೆಯಾಗಿ ಕಾಡುತ್ತಿದೆ “ಇಷ್ಟು ವರ್ಷ ನನ್ನ ಜೀವನ ಸಂಗಾತಿಯಾಗಿರುವ ದೀಪಗಳು ಇರುವವರೆಗೂ ಈ ಸಂಪ್ರದಾಯ ಮುಂದುವರಿಯಲಿ ‘ ಎಂದು ಹೇಳಿದ್ದಾನೆ..

Leave a Reply