ಬೆಂಗಳೂರು: ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಮುಳುಗಿಸಲು ಬೇರೆ ಯಾರೂ ಬೇಕಾಗಿಲ್ಲ. ಬಿಜೆಪಿ ಪಕ್ಷದ ಐದು ನಾಯಕರು ಸಾಕು ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಯುಟಿ ಖಾದರ್ ಟಾಂಗ್ ನೀಡಿದ್ದಾರೆ.

ಸಂಸದರಾದ ಅನಂತ್ ಕುಮಾರ್ ಹೆಗ್ಡೆ, ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲು, ಪ್ರತಾಪ್ ಸಿಂಹ ಮತ್ತು ಗೋ ಮಧುಸೂದನ್ ಇವರು ಬಿಜೆಪಿಯನ್ನು ಕರ್ನಾಟಕದಲ್ಲಿ ಮುಳುಗಿಸಲು ಸಾಕು. ಎಂದು ವಿಕಾಸ ಸೌಧದಲ್ಲಿ ಮಾಧ್ಯಮದವರನ್ನುದ್ದೇಶಿಸಿ ಹೇಳಿದರು.

ಜನ ಜೈಲಿಗೆ ಹೋದವರನ್ನು ಮರೆಯುತ್ತಾರೆ. ಆದರೆ ಅನ್ನ, ಮನೆ ಕೊಟ್ಟವರನ್ನು ಮರೆಯುವುದಿಲ್ಲ. ಮೋದಿ ಹವಾ ಗುಜರಾತಿನಲ್ಲಿ ನಡೆದಿಲ್ಲ, ಇನ್ನು ಕರ್ನಾಟಕದಲ್ಲಿ ನಡೆಯಬಹುದೇ? ರಾಹುಲ್ ಗಾಂಧಿಯವರಿಗೆ ಸಿದ್ದರಾಮಯ್ಯ, ಖರ್ಗೆ, ಪರಮೇಶ್ವರ್ ರಂತಹ ನಾಯಕರು ಸಿಕ್ಕಿದ್ದಿದ್ದರೆ ಗುಜರಾತಿನಲ್ಲಿ ಬಿಜೆಪಿ ಧೂಳೀಪಟವಾಗಿ ಕಾಂಗ್ರೆಸ್ ಗೆಲ್ಲುತ್ತಿತು ಎಂದರು.

Leave a Reply