ಒಂದು ದಿನಕ್ಕೆ ದೇಶದ ಪ್ರಧಾನಿಯಾಗಲು ನಿಮಗೆ ಅವಕಾಶ ಸಿಕ್ಕಿದರೆ ಏನಾಗಬಹುದು?

ಉತ್ತರ ಅಮೆರಿಕದ ಪ್ರಧಾನಿ ಜಸ್ಟಿನ್ ಟ್ರುಡಿಯು, ಐದು ವರ್ಷದ ಬಾಲಕಿಯೊಬ್ಬಳಿಗೆ ಒಂದು ದಿನದವರೆಗೆ ಈ ಅವಕಾಶ ನೀಡಿದರು. ಬೆಲ್ಲಾ ಥಾಮ್ಸನ್ ಎಂಬ ಬಾಲಕಿ ಈ ಪುರಸ್ಕಾರವನ್ನು ಪಡೆದಿದಳು.

ಬೆಲ್ಲಾ ಥಾಮ್ಸನ್ ಒಂದು ಲೇಖನ ಸ್ಪರ್ಧೆಯಲ್ಲಿ ವಿಜೇತಳಾಗಿದ್ದು, ಬಹುಮಾನವಾಗಿ ಅವಳಿಗೆ ಈ ಸದವಕಾಶ ಸಿಕ್ಕಿತ್ತು.

ಸ್ವತಃ ಜಸ್ಟಿನ್ ಟ್ರೂಡೆಯವರು ಪ್ರಧಾನಿ ನಿವಾಸಕ್ಕೆ ಆಕೆಯನ್ನು ಸ್ವಾಗತಿಸಿದರು. ಆಕೆ ತನ್ನ ಕುಟುಂಬದ ಜೊತೆ ಒಂದು ದಿನ ಅಲ್ಲಿ ಕಳೆದಳು. ಕಳೆದ ವರ್ಷ ಮೇ ತಿಂಗಳಲ್ಲಿ ಈ ಘಟನೆ ನಡೆದಿತ್ತು.

ಕೆನಡಾದಲ್ಲಿ ಮಕ್ಕಳ ಶೈಕ್ಷಣಿಕ ವಿಷಯದಲ್ಲಿ ಕೆಲಸ ಮಾಡುವ ಸಂಸ್ಥೆಯೊಂದು ಸರಕಾರದ ಸಹಯೋಗದೊಂದಿಗೆ ಈ ಸ್ಪರ್ಧೆಯನ್ನು ಕಳೆದ ವರ್ಷ ಏರ್ಪಡಿಸಿತ್ತು.

ನಾವು ಈ ಆಫೀಸಿನ್ನು ದಿಂಬು ಮತ್ತು ಹಾಸಿಗೆಯ ಕೋಟೆಯನ್ನಾಗಿ ಮಾಡೋಣವೇ ಎಂದು ಥಾಮ್ಸನ್ ಕೇಳಿದಾಗ ಆಕೆಯ ಇಚ್ಛೆಯನ್ನು ಸ್ವತಃ ಪ್ರಧಾನಮಂತ್ರಿ ಜಸ್ಟಿನ್ ನೆರವೇರಿಸಿದರು.

Leave a Reply