ಹರಿಯಾಣ : ಎರಡು ಗಂಟೆಯೊಳಗೆ ಆರುಮಂದಿಯನ್ನು ಕಬ್ಬಿಣದ ಸಲಾಕೆಯಿಂದ ಹೊಡೆದು ಕೊಂದ ಆರೋಪಿಯನ್ನು ಸರೆ ಹಿಡಿಯಲಾಗಿದೆ. ಊರನ್ನು ನಡುಗಿಸಿದ ಈ ಘಟನೆ ಹರಿಯಾಣದ ಪಲ್ವಾಲದಲ್ಲಿ ನಡೆದಿದೆ. ಜನವರಿ ಎರಡರಂದು ಮಧ್ಯ ರಾತ್ರಿ ಎರಡು ಗಂಟೆಯಿಂದ ನಾಲ್ಕು ಗಂಟೆಯ ಒಳಗೆ ಈ ಕೃತ್ಯ ನಡೆದಿದೆ.
ಪಲ್ವಾಲೆ ಗ್ರಾಮದ ಆಗ್ರಾ ರಸ್ತೆಯ ಬದಿಯಲ್ಲಿ ನಾಲ್ವರು ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮೃತರಲ್ಲಿ ಓರ್ವ ಮಹಿಳೆ ಮತ್ತು ಭದ್ರತಾ ಪಡೆಯ ಜವಾನನೂ ಸೇರಿದ್ದಾನೆ. ಎಲ್ಲರೂ ಹೊಡೆತದೇಟಿಗೆ ಸತ್ತ ಕಾರಣ ಇದು ಓರ್ವನ ಕೃತ್ಯ ಎಂದು ಪೋಲೀಸರು ಅಂದಾಜಿಸಿದ್ದರು.
ಆಸ್ಪತ್ರೆಯ ಸಿ,ಸಿ.ಟಿ.ವಿ, ಗಮನಿಸಿದಾಗ ಓರ್ವನು ಕಬ್ಬಿಣದ ಸಲಾಕೆ ಹಿಡಿದು ಹೋಗುತ್ತಿರುವ ದೃಶ್ಯ ಪತ್ತೆಯಾಯಿತು. ಬಳಿಕ ಆದರ್ಶ ನಗರದಲ್ಲಿ ಆತನನ್ನು ಬಂಧಿಸಲಾಯಿತು. ಬಂಧನದ ವೇಳೆ ಪೋಲೀಸರ ಮೇಲೆಯೂ ಈತ ದಾಳಿ ನಡೆಸಿದ್ದ. ಆತನನ್ನು ತೀವ್ರವಾಗಿ ವಿಚಾರಿಸಲಾಗುತ್ತಿದೆ.