ಪ್ರತಿಕೂಲ ಪರಿಸ್ಥಿತಿಯು ಒಬ್ಬನ ನಿಜವಾದ ಪರೀಕ್ಷೆ. ವಿರೇಂದರ್ ಸಿಂಗ್ ಅದಕ್ಕೆ ಜೀವಂತ ಉದಾಹರಣೆ.
ಮಾತು ಬಾರದ, ಕಿವಿ ಕೇಳದಿದ್ದರೂ ಕುಸ್ತಿಪಟುವಾಗುವುದಕ್ಕೆ ಈ ದೌರ್ಬಲ್ಯ ಅವರಿಗೆ ತಡೆಯಾಗಲಿಲ್ಲ ಎಂಬುವುದಕ್ಕೆ ಏಳು ವಿಭಾಗಗಳಲ್ಲಿ ಅವರು ಪಡೆದ ಅಂತಾರಾಷ್ಟ್ರೀಯ ಪದಕಗಳೇ ಸಾಕ್ಷಿ.

ಇಷ್ಟೆಲ್ಲಾ ಸಾಧನೆ ಮಾಡಿ ಶ್ರಮಪಟ್ಟರೂ ಸ್ವಂತದೊಂದು ಮನೆ ಖರೀದಿಸಲು ಅವರಿಗೆ ಸಾಧ್ಯವಾಗದೆ ಇರುವುದು ದೌರ್ಭಾಗ್ಯಕರವಾಗಿದೆ.
ಕಿವುಡ ಕ್ರೀಡಾಪಟುಗಳನ್ನು ನಿರ್ಲಕ್ಷಿಸುವುದರಿಂದ ಅವರು ಅವಕಾಶವಂಚಿತರಾಗಿರುವುದು ಇದಕ್ಕೆ ಕಾರಣ.

ಇಂಟರ್ನ್ಯಾಷನಲ್ ಒಲಿಂಪಿಕ್ ಸಮಿತಿಯಿಂದ ಡೆಫಲಿಂಫಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಮಂಜೂರಾತಿ ನೀಡಿದ್ದರೂ, ಅವರು ಸರಕಾರದ ನಗದು ಸಹಾಯದಿಂದ ವಂಚಿತರಾಗಿದ್ದಾರೆ.

ಬಾಲ್ಯದಲ್ಲಿ ಅಂಗವೈಕಲ್ಯತೆ ಒಳಗಾಗಿ ಜನರು ಮೂದಲಿಸಲು ತೊಡಗಿದಾಗ, ಅವರಿಗೆ ಪ್ರತ್ಯುತ್ತರವಾಗಿ ಕುಸ್ತಿಯನ್ನು ಆರಿಸಿ ಸಾಧನೆ ಮಾಡಿದರು. ಆದರೆ ಹಲವಾರು ಪದಕಗಳು ಸಿಕ್ಕಿದರೂ, ಇಂದಿನ ವರೆಗೆ ಅವರದು ಕಠಿಣ ಬದುಕು.

Leave a Reply