Representational image

ಚೆನ್ನೈನ ಸರ್ಕಾರಿ ಅಧಿಕಾರಿಯೊಬ್ಬರ ಮನೆಯ ಕೆಲಸದಾಕೆಯ ಅಕೌಂಟ್ ನಲ್ಲಿ ಲಕ್ಷಗಟ್ಟಲೆ ಹಣ ಇರುವುದು ಕಂಡು ಬಂದಿದೆ.
ಸರಿತಾ ಎನ್ನುವ ಮನೆಕೆಲಸದಾಕೆಯ ಅಕೌಂಟ್ ನಲ್ಲಿ ಕೇವಲ 700 ರೂಪಾಯಿ ಇದ್ದದ್ದು, 75 ಲಕ್ಷ ರೂಪಾಯಿಗೆ ಏರಿದೆ.
ಪೆಟ್ರೋಲಿಯಂ ಸುರಕ್ಷತಾ ಸಂಸ್ಥೆ ಇಲಾಖೆಯ ಜಂಟಿ ಮುಖ್ಯ ನಿಯಂತ್ರಕರಾಗಿ ಕೆಲಸ ಮಾಡುತ್ತಿದ್ದ ಸರಕಾರಿ ಅಧಿಕಾರಿಯ ಮನೆಯಲ್ಲಿ ಈಕೆ ಮನೆಕೆಲಸ ಮಾಡುತ್ತಿದ್ದಳು.
ಕೇವಲ 32 ತಿಂಗಳ ಹಿಂದೆ ಸರಿತಾರವರು ಈ ಅಧಿಕಾರಿಯ ಮನೆಯಲ್ಲಿ ಕೆಲಸಕ್ಕೆ ಸೇರಿದ್ದರು. ಆ ಸಮಯದಲ್ಲಿ ಸರಿತಾರವರ ಬ್ಯಾಂಕ್ ಖಾತೆಯಲ್ಲಿ ಕೇವಲ 700 ರೂಪಾಯಿಗಳು ಇತ್ತು.

ಸರಿತಾರ ಬ್ಯಾಂಕ್ ಖಾತೆಯನ್ನು ನೋಡಿದ ಸಿಬಿಐಗೆ ಕೂಡ ಆಶ್ಚರ್ಯವಾಗಿದೆ. ಯಾವುದೊ ಒಂದು ಪ್ರಕರಣದ ಕುರಿತು ಅಧಿಕಾರಿಯ ವಿರುದ್ಧ ಸಿಬಿಐ ತನಿಖೆ ನಡೆಸುತ್ತಿದ್ದಾಗ ಈ ಅಂಶ ಬೆಳಕಿಗೆ ಬಂದಿದೆ. ವರದಿಯ ಪ್ರಕಾರ ಈ ಅಧಿಕಾರಿಗಳ ವಿರುದ್ಧ ಆದಾಯಕ್ಕಿಂತ ಹೆಚ್ಚಿನ ಆಸ್ತಿಯನ್ನು ಹೊಂದಿದ ಬಗ್ಗೆ ತನಿಖೆ ನಡೆಯುತ್ತಿತ್ತು. ಮಾತ್ರವಲ್ಲ, ತನಿಖೆಯ ವೇಳೆ ಸರಿತಾ 1.37 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆಂದು ಬಹಿರಂಗ ಆಗಿದೆ.

Leave a Reply