ವೋಟಿಂಗ್ ಗಾಗಿ ಲೈನ್ ನಲ್ಲಿ ನಿಂತಿದ್ದ 95 ವರ್ಷದ ಹಿರಿಯರೊಬ್ಬರು ತಲೆತಿರುಗಿ ಬಿದ್ದು ಸಾವನ್ನಪ್ಪಿದ ಘಟನೆ ವರದಿಯಾಗಿದೆ. ಲೋಕಸಭಾ ಚುನಾವಣೆಯ ದ್ವಿತೀಯ ಹಂತದ ಮತದಾನದ ಸಂದರ್ಭದಲ್ಲಿ ಒಡಿಶಾದ ಗಂಜಾಮ್ ಜಿಲ್ಲೆಯ ಒಂದು ಮತದಾನ ಕೇಂದ್ರದಲ್ಲಿ ವೋಟಿಂಗ್ ಗಾಗಿ ಲೈನ್ ನಲ್ಲಿ ನಿಂತು ತಮ್ಮ ಸರದಿಗಾಗಿ ಕಾಯುತ್ತಿದ್ದ 95 ವರ್ಷದ ವೃದ್ಧ ರೊಬ್ಬರು ಮರಣಹೊಂದಿದ್ದಾರೆ.
ವಾಸ್ತವದಲ್ಲಿ ತಲೆತಿರುಗಿ ಬಿದ್ದ ಈ ಹಿರಿಯರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾಯಿತಾದರೂ ಆಸ್ಪತ್ರೆ ಅವರನ್ನು ಮೃತಪಟ್ಟಿದ್ದಾರೆಂದು ಘೋಷಿಸಿತು.

 

Leave a Reply