ಸಾಂದರ್ಭಿಕ ಚಿತ್ರ

ನವದೆಹಲಿ : ಭಾರೀ ವಿವಾದ ಸೃಷ್ಟಿಸಿದ ಬಳಿಕ ಆಧಾರ್ ಗೆ ನ್ಯಾಯಾಲಯ ಹಸಿರು ನಿಶಾನೆ ತೋರಿಸಿದೆ. ಆಧಾರ್ ಭೃಷ್ಟಾಚಾರವನ್ನು ತಡೆಯುತ್ತದೆ. ಪೌರನಿಗೆ ಇದು ಬಹಳ ಕಡಿಮೆ ಮಾಹಿತಿ ನೀಡುತ್ತದೆ. ಆದರೆ ಬಡವರಿಗೆ ಸರಕಾರದ ಸೌಲಭ್ಯ ಪಡೆಯಲು ಇದು ತುಂಬಾ ಸಹಕಾರಿಯಾಗುತ್ತದೆಲ್ಲೆಂದು ನ್ಯಾಯಾಲಯ ತಿಳಿಸಿತು. ಆದರೆ ಆಧಾರ್ ವಿವರಗಳು ಹೆಚ್ಚು ಸುರಕ್ಷಿತವಲ್ಲವೆಂಬುದನ್ನು ದೇಶದ ಶೇಕಡಾ 80ರಷ್ಟು ಜನ ಭಾವಿಸಿದ್ದಾರೆ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ.

ಆಧಾರ್ ಹೆಚ್ಚು ಸುರಕ್ಷಿತವೆಂದು ಸರಕಾರ ಹೇಳುವಾಗ ಹತ್ತರಲ್ಲಿ ಎಂಟು ಮಂದಿ ಆಧಾರ್ ನ ಸುರಕ್ಷತೆಯ ಬಗ್ಗೆ ಅನುಮಾನ ಆತಂಕ ವ್ಯಕ್ತ ಪಡಿಸಿದ್ದಾರೆಂದು ಮಾರ್ಕೆಟ್ ರಿಸರ್ಚ್ ಕಂಪೆನಿಯಾದ ವೆಲೋಸಿಟ್ ಎಂ ಆರ್ ಭಾರತದಲ್ಲಿ 5800 ಜನರಲ್ಲಿ ನಡೆಸಿದ ಸರ್ವೆಯಲ್ಲಿ ಸ್ಪಷ್ಟವಾಗಿದೆ.

ಇನ್ನು ಸಿಮ್ ಬ್ಯಾಂಕ್ ಖಾತೆಗೆ ಆಧಾರ್ ಕಡ್ಡಾಯವಲ್ಲ : ನ್ಯಾಯಾಲಯ

ಆಧಾರ್ ಕಾರ್ಡ್ ಇನ್ನು ಮುಂದೆ ಮೊಬೈಲು ಸಿಮ್ ಪಡೆಯಲು, ಬ್ಯಾಂಕ್ ಖಾತೆ ತೆರೆಯಲು ಹಾಗೂ ಶಾಲಾ ಪ್ರವೇಶಕ್ಕೆ ಅಗತ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಖಾಸಗಿ ಕಂಪೆನಿಗಳಿಗೆ ಆಧಾರ್ ಕಡ್ಡಾಯಗೊಳಿಸುವ 157 ನೇ ವಿಧಿಯನ್ನು ನ್ಯಾಯಾಲಯ ರದ್ದುಗೊಳಿಸಿದೆ. ಅನಧಿಕೃತ ವಲಸಿಗರಿಗೆ ಆಧಾರ್ ಕಾರ್ಡ್ ನೀಡಬಾರದೆಂದು ಸರಕಾರಕ್ಕೆ ಆದೇಶಿಸಿದ ನ್ಯಾಯಾಲಯ ಆಧಾರ್ ಗೌಪ್ಯತೆ ಕಾಪಾಡಲು ಸರಕಾರ ಸನ್ನದ್ಧವಾಗಬೇಕೆಂದೂ ಆದೇಶಿಸಿತು.

ಯಾವುದಕ್ಕೆಲ್ಲಾ ಆಧಾರ್ ಕಡ್ಡಾಯ?

  • ಐಟಿ ರಿಟರ್ನ್ಸ್ ಸಲ್ಲಿಕೆಗೆ ಆಧಾರ್ ಲಿಂಕ್ ಕಡ್ಡಾಯ
  • ಪಾನ್ ಕಾರ್ಡ್ ಜೊತೆ ಆಧಾರ್ ಜೋಡಣೆ ಕಡ್ಡಾಯ
  • ಸರ್ಕಾರಿ ಯೋಜನೆಗಳಿಗೆ ಆಧಾರ್ ಕಡ್ಡಾಯ

ಯಾವುದಕ್ಕೆಲ್ಲಾ ಆಧಾರ್ ಕಡ್ಡಾಯವಲ್ಲ?

  • ಯುಜಿಸಿ, ನೀಟ್ ಮತ್ತು ಸಿಬಿಎಸ್ ಇ ಪರೀಕ್ಷೆಗಳಿಗೆ ಆಧಾರ್ ಕಡ್ಡಾಯವಲ್ಲ
  • ಮೊಬೈಲ್ ಫೋನ್ ಗೆ ಆಧಾರ್ ಜೋಡಣೆ ಕಡ್ಡಾಯವಲ್ಲ
  • ಶಿಕ್ಷಣ ಸಂಸ್ಥೆಗಳಿಗೂ ಆಧಾರ್ ಕಡ್ಡಾಯವಲ್ಲ
  • ಖಾಸಗೀ ಕಂಪನಿಗಳು ಆಧಾರ್ ಬಳಸುವಂತಿಲ್ಲ.
  • ಬ್ಯಾಂಕ್ ಅಕೌಂಟ್ ಓಪನ್ ಮಾಡಲು ಆಧಾರ್ ನೀಡುವ ಅಗತ್ಯವಿಲ್ಲ
  • ಹೊಸ ಸಿಮ್ ಕಾರ್ಡ್ ಖರೀದಿಸಲು ಆಧಾರ್ ಕಾರ್ಡ್ ಕಡ್ಡಾಯವಲ್ಲ

Leave a Reply