ಮುಂಬಯಿ :ನನ್ನ ಅಮ್ಮ ಬೇರೆ ಯಾರೂ ಅಲ್ಲ, ಬಾಲಿವುಡ್‌ ನಟಿ ವಿಶ್ವ ಸುಂದರಿ, ಐಶ್ವರ್ಯಾ ರೈ ಬಚ್ಚನ್‌ ಎಂದು ಆಂಧ್ರ ಪ್ರದೇಶದ ಯುವಕ ಸಂಗೀತ್‌ ಕುಮಾರ್‌ ಯುವಕನ ವಾದ ವಿವಾದವಾಗಿದೆ.

“ನಾನು ಐಶ್ವರ್ಯಾ ರೈಬಚ್ಚನ್‌ಗೆ 1988ರಲ್ಲಿ ಲಂಡನ್‌ನಲ್ಲಿ ಐವಿಎಫ್ (ಇನ್‌ ವಿಟ್ರೋ ಫ‌ರ್ಟಿಲೈಸೇಶನ್‌) ಮೂಲಕ ಜನಿಸಿದೆ.
ಐಶ್ವರ್ಯ ಹೆತ್ತವರಾದ ಕೃಷ್ಣ ರೈ ಮತ್ತು ವೃಂದಾ ನನ್ನ ಸಾಕಿ ಸಲಹಿದ್ದರು ಎಂದಿದ್ದು,ಈತನ ಹೇಳಿಕೆಯನ್ನು ಪಿಂಕ್‌ವಿಲಾ ವರದಿ ಮಾಡಿದೆ.

“ನನ್ನ ತಂದೆ ನನ್ನನ್ನು ಅನಂತರ ವಿಶಾಖಪಟ್ಟಣಕ್ಕೆ ಕರೆತಂದರು.ಅಲ್ಲಿಯ ಬಳಿಕ ನಾನು ಅವರೊಂದಿಗೆ ಇದ್ದೇನೆ.
ಐಶ್ವರ್ಯಾ ರೈ ನನ್ನ ಅಮ್ಮ ಎಂಬುದನ್ನು ಸಾಬೀತು ಪಡಿಸುವ ದಾಖಲೆ ಪತ್ರಗಳ ನಾಶಕ್ಕೆ ನನ್ನ ಸಂಬಂಧಿಕರೇ ಕಾರಣ”ಎಂದು 29ರ ಹರೆಯದ ಸಂಗೀತ್‌ ಕುಮಾರ್‌ ಹೇಳಿದ್ದಾನೆ.

Leave a Reply